ಜೈ ಶ್ರೀ ಕೃಷ್ಣ🙏🏻

Поділитися
Вставка
  • Опубліковано 8 лют 2025
  • "ಓಂ ದೇವಕಿನಂದನಾಯ ವಿದ್ಮಹೇ ವಾಸುದೇವಯ್ಯ ಧೀಮಹಿ ತನ್ನೋ ಕೃಷ್ಣಃ ಪ್ರಚೋದಯಾತ್"....
    ಶ್ರೀ ಕೃಷ್ಣನ ಈ ಮಂತ್ರವನ್ನು ಪಠಿಸುವುದರಿಂದ ವ್ಯಕ್ತಿಯ ಜೀವನದಿಂದ ಮತ್ತು ಮನಸ್ಸಿನಿಂದ ಎಲ್ಲಾ ದುಃಖಗಳು ದೂರವಾಗುತ್ತವೆ. ನೀವು ಯಾವುದಾದರೊಂದು ವಿಷಯದ ಬಗ್ಗೆ ಚಿಂತಿಸುತ್ತಿದ್ದರೆ, ಆ ಚಿಂತೆಯಿಂದ ಮುಕ್ತಿಯನ್ನು ಪಡೆಯುವುದಕ್ಕಾಗಿ ಮುಂಜಾನೆ ಮತ್ತು ಸಂಜೆ ಈ ಮಂತ್ರವನ್ನು 108 ಬಾರಿ ಜಪಿಸಿ.
    ಕೃಷ್ಣ ಏನಬಾರದೆ | ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ||ಪ||
    ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ ||ಅ|| ಮಲಗಿದ್ದು ಮೈಮುರಿದು ಏಳುತಲೊಮ್ಮೆ ಕೃಷ್ಣ ಎನಬಾರದೆ ||ನಿತ್ಯ ||
    ಸುಳಿದಾಡುತ ಮನೆಯೊಳಗಾದರು ಒಮ್ಮೆ ಕೃಷ್ಣ ಎನಬಾರದೆ ||೧|| ಮೇರೆ ತಪ್ಪಿ ಮಾತಾಡುವಾಗಲೊಮ್ಮೆ | ಕೃಷ್ಣಎನಬಾರದೆ || ದೊಡ್ಡ ||
    ದಾರಿಯ ನಡೆದಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ ||೨||
    ಗಂಧವ ಪೂಸಿ ತಾಂಬೂಲವ ಮೆಲುವಾಗ | ಕೃಷ್ಣ ಎನಬಾರದೆ ತನ್ನ | ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಎನಬಾರದೆ ||೩||
    ಪರಿಹಾಸ್ಯದ ಮಾತಾಡುತಲೊಮ್ಮೆ | ಕೃಷ್ಣ ಏನಬಾರದೆ | ಪರಿ ಪರಿ ಕೆಲಸದೊಳೊಂದು ಕೆಲಸವೆಂದು | ಕೃಷ್ಣ ಏನಬಾರದೆ ||೪||
    ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ || ಬಹು || ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ ||೫||
    ನೀಗದಾಲೋಚನೆ ರೋಗೋಪದ್ರವದಲೊಮ್ಮೆ | ಕೃಷ್ಣ ಎನಬಾರದೆ || ಒಳ್ಳೆ ಭೋಗ ಪಡೆದು ಅನುರಾಗದಿಂದಿರುವಾಗ | ಕೃಷ್ಣ ಎನಬಾರದೆ ||೬||
    ದುರಿತರಾಶಿಗಳನು ತಂದು ಬಿಸುಡಲು ಕೃಷ್ಣ ಎನಬಾರದೆ | ಸದಾ || ಗರುಡವಾಹನ ಸಿರಿಪುರಂದರ ವಿಠಲನ್ನೇ | ಕೃಷ್ಣ ಎನಬಾರದೆ ||೭||
    ಕೃಷ್ಣ ಎನಬರದೆ | ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ||ಪ||

КОМЕНТАРІ • 2