#ನವರಾತ್ರಿ

Поділитися
Вставка
  • Опубліковано 10 жов 2024
  • ಅಲಂಕರಿಸೋಣ ಬನ್ನಿ ದುರ್ಗಾದೇವಿಯ
    ನಳಿನನಯನದಿಂದ ಹೊಳೆವ ಸುಂದರಾಂಗಿಯ
    ಪಾದಕೆ ಕೆಂಪು ಬಣ್ಣದಿಂದ ಸಿಂಗರಿಸುತ್ತ
    ಸದಮಳ ಭಕ್ತಿಯಿಂದ ಗೆಜ್ಜೆ ಕಟ್ಟುತ
    ಮದಮತ್ಸರ ಬಿಡಿಸೆಂದು ಬಾಗಿ ಬೇಡುತ
    ಹೃದಯದಿಂದ ಪೀತಾಂಬರ ಉಡಿಸಿ ನಮಿಸುತ
    ನವರತ್ನದ ಮಾಲೆ ದೇವಿಗೆ ಹಾಕುತ
    ನವನವೀನ ಬಳೆಗಳ ಕೈಯಿಗೆ ತೊಡಿಸುತ
    ನವ ಉಲ್ಲಾಸದಿಂದ ಓಲೆ ಝುಮುಕಿ ಹಾಕುತ
    ನವರಾತ್ರಿಯ ಪೂಜೆ ಸ್ವೀಕರಿಸು ಎನ್ನುತ
    ಚೆಂದದ ಸೊಂಟಕೆ ಓಡ್ಯಾಣ ಕಟ್ಟುತ
    ಅಂದವಾದ ಕೊರಳಿಗೆ ಸರಗಳ ಹಾಕುತ
    ಕುಂದದ ಸೌಭಾಗ್ಯದಾತೆಗೆ ಕುಂಕುಮ ಹಚ್ಚುತ
    ಮಂದಗಮನೆ ಕೆನ್ನೆಗೆ ಅರಿಶಿನ ಹೆಚ್ಚಿತ
    ಕಮಲದಂಥ ಕಣ್ಣಿಗೆ ಕಪ್ಪು ಕಾಡಿಗೆ ಹಚ್ಚುತ
    ಸುಮನೋಹರಿ ಹಣೆಲಿ ಬೈತಲೆಮುತ್ತು ಹಾಕುತ
    ಸಮವಿಲ್ಲದ ಹೆರಳಿಗೆ ಜಡೆ ಬಂಗಾರ ಹಾಕುತ
    ಸುಮದಂಥ ದೇವಿಗೆ ಕಿರೀಟ ತೊಡಿಸುತ
    ಮುತ್ತಿನ ಮುಕುರವ ಮೂಗಿಗೆ ಹಾಕುತ
    ಮುತ್ತೈದೆ ಭಾಗ್ಯ ಸ್ಥಿರವಾಗಿಸೆನ್ನುತ
    ರತ್ನಖಚಿತ ಮಂಟಪದಲಿ ಕುಳ್ಳಿರಿಸುತ್ತ
    ಉತ್ತಮ ಆಯುಧ ಅಷ್ಟ ಭುಜಕೆ ನೀಡುತ
    ಸಿದ್ಧವಾದ ದುರ್ಗಮ್ಮನ ಈಕ್ಷಿಸಿ ಸುಖಿಸುತ
    ಉದ್ಧರಿಸು ಎಂದು
    ಪಾದಪದ್ಮಕೆರಗುತ
    ಬದ್ಧರಾಗಿ ಧ್ಯಾನ ಜಪವ ತಪ್ಪದೆ ಮಾಡುತ
    ಸಿದ್ಧಿದಾತೆ ಸಿರಿಹರಿ ಸೋದರಿಗೆ ನಮಿಸುತ
    ಶ್ರೀ ಕೃಷ್ಣಾರ್ಪಣಮಸ್ತು
    ರೂಪಶ್ರೀ ಶಶಿಕಾಂತ್

КОМЕНТАРІ • 1

  • @mcskanth
    @mcskanth 8 хвилин тому

    Best wishes