ಆವ ಕುಲವೋ ರಂಗಾ I AVA KULAVO RANGAA I Bhajana By Keshava Acharya Benjanapadavu

Поділитися
Вставка
  • Опубліковано 28 вер 2024
  • ಆವ ಕುಲವೋ ರಂಗಾ ಅರಿಯಲಾಗದು ||
    ಆವ ಕುಲವೆಂದರಿಯಲಾಗದು
    ಗೋವ ಕಾಯ್ವ ಗೊಲ್ಲನಂತೆ
    ದೇವಲೋಕದ ಪಾರಿಜಾತವು
    ಹೂವ ಸತಿಗೆ ತಂದನಂತೆ||
    ಗೋಕುಲದಲ್ಲಿ ಹುಟ್ಟಿದನಂತೆ
    ಗೋವುಗಳನ್ನು ಕಾಯ್ದನಂತೆ ||
    ಕೊಳಲನೂದಿ ಮೃಗಪಕ್ಷಿಗಳ
    ಮರಳು ಮಾಡಿದನಂತೆ
    ತರಳತನದಿ ವರಳ ನೆಗಹಿ
    ಮರವ ಮುರಿದು ಮತ್ತೆ ಹಾರಿ
    ತೆರೆದು ಬಾಯಿ‌ಯೊಳಗಿರೇಳು ಲೋಕವ
    ಇರಿಸಿ ತಾಯಿಗೆ ತೋರ್ದನಂತೆ ||
    ಗೊಲ್ಲತಿಯರ ಮನೆಗೆ ಪೊಕ್ಕು
    ಕಳ್ಳತನವ ಮಾಡಿದನಂತೆ ||
    ಒಲ್ಲದ ಪೂತನಿಯ ವಿಷವನುಂಡು
    ಮೆಲ್ಲನೆ ತೃಣನ ಕೊಂದನಂತೆ
    ಪಕ್ಷಿ ತನ್ನ ವಾಹನವಂತೆ
    ಹಾವು ತನ್ನ ಹಾಸಿಗೆಯಂತೆ
    ಮುಕ್ಕಣ್ಣ ತನ್ನ ಮೊಮ್ಮಗನಂತೆ
    ಮುದ್ದುಮುಖದ ಚೆಲ್ವನಂತೆ ||
    ಕರಡಿ ಮಗಳ ತಂದನಂತೆ
    ಶರಧಿ ಮಗಳು ಮಡದಿಯಂತೆ ||
    ಧರಣಿಯನ್ನು ಬೇಡಿದನಂತೆ
    ಈರೇಳು ಲೋಕದ ಒಡೆಯನಂತೆ
    ಹಡಗಿನಿಂದಲಿ ಬಂದನಂತೆ
    ಕಡಲದಡೆಯಲಿ ನಿಂದನಂತೆ
    ಒಡನೆ ಮಧ್ವರಿಗೊಲಿದನಂತೆ ಒಡೆಯ ಹಯವದನನಂತೆ ||
    ‪@likhithrajpolali3582‬
    ‪@jpkavoorcreations‬
    ‪@sumanraajpolali8831‬
    ‪@Avinashdevadiga121‬
    ‪@harshithshetty94‬
    ‪@harishmanikantapura9663‬
    ‪@githeshkotian‬
    ‪@shreebhadrakalicreation8611‬
    Special Thanks :- ‪@Suddi9‬

КОМЕНТАРІ • 1