ಸುಗಂಧರಾಜ ಹೂವಿನ ಕೃಷಿ | Sugandaraja flower cultivation | Rajanigandha floriculture
Вставка
- Опубліковано 10 лют 2025
- ನಮಸ್ತೇ ಸ್ನೇಹಿತರೆ ನಿಮಗೆಲ್ಲರಿಗೂ ನೇಗಿಲಯೋಗಿ ಯುಟ್ಯೂಬ್ ಚಾನೆಲ್‍ಗೆ ಆದರದ ಸ್ವಾಗತ. ನಾವಿಂದು ವಾಣಿಜ್ಯ ಬೆಳೆಗಳಲ್ಲಿ ಪ್ರಮುಖವಾದ ಹೂವಿನ ಕೃಷಿಯಲ್ಲಿ ಸುಗಂಧರಾಜ ಹೂವಿನ ಕೃಷಿ ಅಂದರೆ ಟ್ಯೂಬ್ ರೋಸ್ ಅಥವಾ ರಜಿನಿಗಂಧ ಎಂದು ಸಹ ಕರೆಯಲ್ಪಡುವ ಹೂವಿನ ಕೃಷಿಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ತಿಳಿಸಲು ಬಂದಿರುವೆ.
ಸ್ನೇಹಿತರೆ , ಹೂವಿನ ಕೃಷಿ ಬೆಳೆಗಾರನಿಗೆ ನಿರಂತರ ಆದಾಯ ಕೊಡಬಲ್ಲ ಒಂದು ಬೆಳೆ ಎಂದರೆ ತಪ್ಪಾಗಲಾರದು. ಹೂವಿನ ಕೃಷಿ ಕೈಗೊಂಡಾಗ ಹೂ ಬಿಡಲು ಆರಂಬಿಸಿದರೆ ಅವರು ಪ್ರತಿ ದಿನ , ಇಲ್ಲವೇ ದಿನ ಬಿಟ್ಟು ದಿನ ಅಥವಾ ವಾರಕ್ಕೆ ಒಮ್ಮೆಯಂತೆ ಹೂ ಕುಯ್ದು ಹಣಗಳಿಸಬಹುದಾಗಿದೆ. ಹೂವಿನ ಬೆಳೆ ಬೆಳೆಯುವವರು ಮೊದಲು ಮಾರುಕಟ್ಟೆಯ ಬೇಡಿಕೆ ಹಾಗೂ ಆಯಾ ಹಬ್ಬ ಹರಿದಿನಕ್ಕೆ ಹೊಂದುವಂತೆ ಬೆಳೆದು ಕೊಯಿಲು ಮಾಡಿ ಮಾರಾಟ ಮಾಡುವುದು. ಹಾಗೂ ಡೆಕೋರೇಟರ್ಸ್ ಹತ್ತಿರ ನೇರ ವಹಿವಾಟು ಮಾಡಿಕೊಳ್ಳುವುದರ ಕುರಿತು ಒಪ್ಪಂದ ಮಾಡಿಕೊಂಡು ಈ ರೀತಿಯ ಸಮೀಕ್ಷೆ ನಡೆಸಿ ನಂತರ ಅದಕ್ಕೆ ಅನುಗುಣವಾಗಿ ಸೂಕ್ತವಾದ ಹೂವಿನ ಬೆಳೆಯನ್ನು ಬೆಳೆಯಲು ಮುಂದಾಗಬೇಕು. ನೀವು ತೆಗೆದು ಕೊಂಡ ನಿರ್ಧಾರದಲ್ಲಿ ಅದು ಸುಗಂಧರಾಜ ಹೂವಾಗಿದ್ದಲ್ಲಿ ಅದರ ವಿವಿಧ ತಳಿಗಳು, ಅದಕ್ಕೆ ಸೂಕ್ತವಾದ ವಾತವರಣ, ಮಣ್ಣಿನ ಗುಣಮಟ್ಟ, ನೆಡುವ ಬಗೆ ಅದಕ್ಕೆ ಹಾಕಬೇಕಾದ ಪೆÇಷಕಾಂಶಗಳು, ವಿವಿಧ ತಳಿಗಳು ನೀಡುವ ಇಳುವರಿ, ಗೆಡ್ಡೆಗಳು ಎಲ್ಲಿ ದೊರೆಯುತ್ತವೆ ಎಂಬುದರ ಹಲವು ವಿಷಯಗಳನ್ನು ನಾವೀಗ ತಿಳಿದುಕೊಳ್ಳೊಣ
#negilayogi #negilayogivideos