ಜಯ ಭಾರತ ಜನನಿಯ ತನುಜಾತೆ / Jaya Bharata jananiya tanujate |

Поділитися
Вставка
  • Опубліковано 14 січ 2025
  • ಜಯ ಭಾರತ ಜನನಿಯ ತನುಜಾತೆ ನಮ್ಮ ನಾಡಗೀತೆ ಈ ಹಾಡಿಗೆ ನಮ್ಮ JJL ಮಕ್ಕಳು ನೃತ್ಯ ಪ್ರದರ್ಶನ ಮಾಡಿದರೇ ದಯವಿತ್ತು ವೀಕ್ಷಿಸಿ ಹೇಗು ಬೆಂಬಲ ನೀಡ
    ಸಾರಾಂಶ : ರಾಷ್ಟ್ರಕವಿ ಕುವೆಂಪು ರಚಿಸಿದ ಈ ಸುಮಧುರ ಗೀತೆ ನಮ್ಮ ಸುವರ್ಣ ಕರ್ನಾಟಕದ ನಾಡಗೀತೆ. ಅರ್ಥಗರ್ಭಿತ ಪದಗಳ ಜೋಡಣೆಯೋ ಅಥವಾ ಮೈಸೂರು ಅನಂತಸ್ವಾಮಿಯವರ ಸಂಗೀತವೋ ಅಥವಾ ಶಾಲೆಗಳಲ್ಲಿ ಹಾಡಿದ ಸವಿನೆನಪೋ ಅಥವಾ ನಮ್ಮ ಅಭಿಮಾನವೋ, ಈ ಗೀತೆ ಹಿರಿಯರಿಗೂ ಮತ್ತು ಕಿರಿಯರಿಗೂ ಅಚ್ಚು ಮೆಚ್ಚು. ಈ ಕನ್ನಡ ರಾಜ್ಯೋತ್ಸವದ ದಿನ, ನೀವು ಎಲ್ಲೇ ಇರಲಿ ಹೇಗೆ ಇರಲಿ ನಮ್ಮ ನಾಡಗೀತೆ ಹಾಡಿ ಮತ್ತು ನಿಮ್ಮ ಬಂಧು ಮಿತ್ರರಿಗೂ ಹೇಳಿ; ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ!
    ಶೀರ್ಷಿಕೆ : ಜಯ ಭಾರತ ಜನನಿಯ ತನುಜಾತೆ
    ಕವಿ : ಕುವೆಂಪು
    ಪ್ರಾಕಾರ : ನಾಡಗೀತೆ / ರಾಷ್ಟ್ರಭಕ್ತಿಗೀತೆ
    ಭಾಷೆ : ಕನ್ನಡ
    ಜಯ ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ.
    ಜಯ ಸುಂದರ ನದಿ ವನಗಳ ನಾಡೇ,
    ಜಯ ಹೇ ರಸಋಷಿಗಳ ಬೀಡೆ.
    ಭೂದೇವಿಯ ಮಕುಟದ ನವಮಣಿಯೆ,
    ಗಂಧದ ಚಂದದ ಹೊನ್ನಿನ ಗಣಿಯೆ.
    ರಾಘವ ಮಧುಸೂಧನರವತರಿಸಿದ
    ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ.
    ಜನನಿಯ ಜೋಗುಳ ವೇದದ ಘೋಷ,
    ಜನನಿಗೆ ಜೀವವು ನಿನ್ನಾವೇಶ.
    ಹಸುರಿನ ಗಿರಿಗಳ ಸಾಲೇ,
    ನಿನ್ನಯ ಕೊರಳಿನ ಮಾಲೆ.
    ಕಪಿಲ ಪತಂಜಲ ಗೌತಮ ಜಿನನುತ
    ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ.
    ಶಂಕರ ರಾಮಾನುಜ ವಿದ್ಯಾರಣ್ಯ,
    ಬಸವೇಶ್ವರ ಮಧ್ವರ ದಿವ್ಯಾರಣ್ಯ.
    ರನ್ನ ಷಡಕ್ಷರಿ ಪೊನ್ನ,
    ಪಂಪ ಲಕುಮಿಪತಿ ಜನ್ನ.
    ಕುಮಾರವ್ಯಾಸರ ಮಂಗಳಧಾಮ,
    ಕವಿಕೋಗಿಲೆಗಳ ಪುಣ್ಯಾರಾಮ.
    ನಾನಕ ರಮಾನಂದ ಕಬೀರರ
    ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ.
    ತೈಲಪ ಹೊಯ್ಸಳರಾಳಿದ ನಾಡೆ,
    ಡಂಕಣ ಜಕಣರ ನೆಚ್ಚಿನ ಬೀಡೆ.
    ಕೃಷ್ಣ ಶರಾವತಿ ತುಂಗಾ,
    ಕಾವೇರಿಯ ವರ ರಂಗ.
    ಚೈತನ್ಯ ಪರಮಹಂಸ ವಿವೇಕರ
    ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ.
    ಸರ್ವಜನಾಂಗದ ಶಾಂತಿಯ ತೋಟ,
    ರಸಿಕರ ಕಂಗಳ ಸೆಳೆಯುವ ನೋಟ.
    ಹಿಂದೂ ಕ್ರೈಸ್ತ ಮುಸಲ್ಮಾನ,
    ಪಾರಸಿಕ ಜೈನರುದ್ಯಾನ.
    ಜನಕನ ಹೋಲುವ ದೊರೆಗಳ ಧಾಮ,
    ಗಾಯಕ ವೈಣಿಕರಾರಾಮ.
    ಕನ್ನಡ ನುಡಿ ಕುಣಿದಾಡುವ ಗೇಹ,
    ಕನ್ನಡ ತಾಯಿಯ ಮಕ್ಕಳ ದೇಹ.
    ಭಾರತ ಜನನಿಯ ತನುಜಾತೆ,
    ಜಯ ಹೇ ಕರ್ನಾಟಕ ಮಾತೆ.
    ಜಯ ಸುಂದರ ನದಿ ವನಗಳ ನಾಡೆ,
    ಜಯ ಹೇ ರಸಋಷಿಗಳ ಬೀಡೆ.

КОМЕНТАРІ •