ಹೃದಯಾಮೃತ - ಕ್ರಿಸ್ತನಿಂದ ಕ್ರಿಸ್ತನಿಗಾಗಿ (Hrudayāmrutha- Kristaninda Kristanigaagi)
Вставка
- Опубліковано 3 жов 2024
- #Ignatius500, #Hrudayamrutha, #GlobalJesuits, #KarnatakaJesuits, #ignatianyear, #AMDG
There, in the Battle of Pamplona fell a soldier and rose a Saint!
This song is a creative expression of St Igntaius' convalescence and conversion. May the soldier saint continue to inspire and intercede for us! St Ignatius of Loyola, pray for us!
-----------------------
ಸಂತ ಇಗ್ನಾಸಿಯವರು ಯುದ್ಧದಲ್ಲಿ ಗಾಯಗೊಂಡು... ದೈಹಿಕ ವೇದನೆ ಮತ್ತು ಆಧ್ಯಾತ್ಮಿಕ ಶೋಧನೆಗೆ ಒಳಗಾದ ಸಂದರ್ಭದಲ್ಲಿ ಮನಸಿನಲಿ ಉಂಟಾದ ಸಂಮಿಶ್ರ ಭಾವನೆಗಳ ಕಾಲ್ಪನಿಕ ರೂಪ ಈ ಹಾಡು.
-----------------------
Audio Credits:
Playback Singer: Sri Rajesh Krishnan
Music Composition: ^i^^o SJ
Lyrics: Fr Leo Florence SJ
Orchestration: Sri Johnson
Mix and Master: Sri Giridhar Divan
Recorded, Mix and Mastered at Grey18 Studios, Bengaluru
++++
ಸಾಹಿತ್ಯ : ಫಾ. ಲಿಯೋ ಫ್ಲಾರೆನ್ಸ್ ಯೇ.ಸ
ಗಾಯನ : ರಾಜೇಶ್ ಕೃಷ್ಣನ್
ವಾದ್ಯ ಸಂಯೋಜನೆ : ಜಾನ್ಸನ್
Mix and Master: Sri Giridhar Divan
Recorded, Mix and Mastered at Grey18 Studios, Bengaluru
----------------------
Video Credits:
Ignacio de Loyola, 2016 FILM
Jesuit Communications (JESCOM)
----------------------
Lyrics
ಎದೆಯಾಳದ ಪಿಸುಮಾತುಗಳ / ದನಿಕೇಳಲು ಮನ ಅಂಜಿದೆ
ನಿಜಕಾಣದ ಹುಸಿ ಕನಸುಗಳ / ಕಹಿನೆನಪುಗಳು ಕಾಡುತ್ತಿವೆ
ಆಸೆ ನೂರಾರು ನನ್ನಲ್ಲಿ/ ಆರದಿರೋ ಜ್ವಾಲೆಯು
ತೀರದ ದಾಹವು ನನ್ನದು / ನೋವಿನ ಸಾಗರವು
ಬದುಕೆನ್ನದು ಬರಿ ಹಾಳೆಯು... ನಿನ್ನ ಬಿಂಬವ ಚಿತ್ರಿಸಲು ಬಾ... ೨
ಆ ಬಿಂಬವ ಪ್ರತಿಬಿಂಬಿಸಲು ... ಸ್ಪೂರ್ತಿಯ ಚಿಲುಮೆ ನೀ ಬಾ...
ಗುರಿಕಾಣದ ದಿಟ್ಟಹೆಜ್ಜೆಗಳು / ಕಾಲೂರಲು ಜಾರುತ್ತಿವೆ
ಬದಲಾಗದ ಬಲುಬಯಕೆಗಳು / ಬಿಸಿತಾಗಲು ಕರಗುತ್ತಿವೆ
ಚೂರು ಬೇಕಾಗಿದೆ ನೆಮ್ಮದಿ / ಹೃದಯದಿ ಬೇಸರವು
ಕಾಣದ ಕಡಲಿಗೆ ಹಂಬಲಿಸಿ / ಸೇರುವ ಕಾತರವು
ಬದುಕೆನ್ನದು ಬರಿ ಹಾಳೆಯು... ನಿನ್ನ ಬಿಂಬವ ಚಿತ್ರಿಸಲು ಬಾ... ೨
ಆ ಬಿಂಬವ ಪ್ರತಿಬಿಂಬಿಸಲು ... ಸ್ಫೂರ್ತಿಯ ಚಿಲುಮೆ ನೀ ಬಾ...
ಕ್ರಿಸ್ತನಿಗಾಗಿ ಮಾಡಿದೆ ಏನು / ಪ್ರಭುಕ್ರಿಸ್ತನಿಗಾಗಿ... ನಾ ಮಾಡುವೆ ಏನು
ಕ್ರಿಸ್ತನೇ ಜೀವ / ಕ್ರಿಸ್ತನೇ ಭಾವ / ಕ್ರಿಸ್ತನಲ್ಲಿ ನವಸೃಷ್ಟಿಯು
ಬದುಕೆನ್ನದು ನಿನ್ನ ಬಿಂಬವು / ನಿನಗಾಗಿ ಬಾಳುವೆನು ನಾ ೨
ನಿನ್ನ ಪ್ರೀತಿಗೆ ಶರಣಾಗಿ ನಾ / ಸಮರ್ಪಿಪೆ ನನ್ನ ಜೀವನ
--------------------