ನಾನೇನ ಮಾಡಿದೆನೋ ರಂಗಯ್ಯ ರಂಗ | ಶ್ರೀಹರಿ ಭಜನೆ | Dasara padagalu

Поділитися
Вставка
  • Опубліковано 9 жов 2024
  • ನಾನೇನ ಮಾಡಿದೆನೋ ರಂಗಯ್ಯ ರಂಗ ನೀ ಯನ್ನ ಕಾಯಬೇಕೊ || ಪ ||
    ಮಾನಾಭಿಮಾನವು ನಿನ್ನದು ಯನಗೇನು
    ದೀನರಕ್ಷಕ ತಿರುಪತಿಯ ವೆಂಕಟರಮಣ || ಅ.ಪ ||
    ರಕ್ಕಸ ಸೂದನನೇ ಕೇಳೋ ಧ್ರುವರಾಯ ಚಿಕ್ಕವನಲ್ಲವೇನೋ
    ಉಕ್ಕಿಬರುವ ಕರ್ಮ ಮಾಡಿದ ಅಜಾಮಿಳ
    ನಿನ್ನಕ್ಕನಮಗನೇನೋ || 1 ||
    ಕರಿರಾಜ ಕರೆಸಿದನೇ ದ್ರೌಪದಿ ದೇವಿ ಬರೆದೋಲೆ ಕಳುಹಿದಳೇ
    ಹರುಷದಿಂದಲಿ ಋಷಿಪತ್ನಿಯ ಶಾಪವ ಪರಿಹರಿಸಿದೆಯಲ್ಲೋ || 2 ||
    ಮುಪ್ಪಿಡಿ ಅವಲಕ್ಕಿಯ ತಂದವನಿಗೆ ಒಪ್ಪುವಂತೆ ಕೊಡಲಿಲ್ಲವೇ
    ಸರ್ಪಶಯನ ಶ್ರೀ ಪುರಂದರ ವಿಠಲ
    ಅಪ್ರಮೇಯ ಕಾಯೋ || 3 ||
    #devotionalsongs #bhajan #havyaka #devotee #song

КОМЕНТАРІ • 3