ಹನುಮ ಮಂತ್ರ

Поділитися
Вставка
  • Опубліковано 11 жов 2024
  • ಹನುಮ ಮಂತ್ರ
    ಬಂದ ಹನುಮ ತಂದ ಮನಕೆ
    ಮುದವನೀವ ಮಂತ್ರವ
    ಮುದದಿ ಬಾಳಿನಾಟವಾಡಿ
    ಗೆಲುವ ಸುಲಭ ತಂತ್ರವ ॥
    ರಾಮನಾಮ ಜಪಿಸಿ ಎಂದ
    ರಾಮಭಜನೆ ಮಾಡಿ ಎಂದ।
    ರಾಮನೊಲಿವ ಕಾರ್ಯದಿಂದ
    ರಾಮನನ್ನು ಒಲಿಸಿ ಎಂದ॥
    ತನ್ನ ಹಿತವ ಮೀರಿ ಬೆಳೆದು
    ತನ್ನ-ಪರರ ಭೇದ ತೊರೆದು।
    ಧರ್ಮ ನೀತಿ ನ್ಯಾಯಕಾಗಿ
    ಕರ್ಮವೆಸಗಿ ಬಾಳಿರೆಂದ॥
    ಗರ್ವ ತೊರೆದು ಗುರುವ ನೆರೆದು
    ಗುರುವು ತೋರಿದಂತೆ ನಡೆದು।
    ಮೇರೆಯಿರದ ಸಾಧನೆಗಳ
    ಮಾಡಿ ಗುರಿಯ ಸೇರಿರೆಂದ॥
    ತಾನು ತನ್ನದೆಂಬ ಮಿತಿಯ
    ಮೀರಿ ನಾವು ನಮ್ಮದೆಂದು।
    ನಮ್ಮ ನಾಳಿನೊಳಿತಿಗಾಗಿ
    ಹನುಮ ದಾರಿ ಹಿಡಿಯುವ-
    ಹನುಮನಂತೆ ನಡೆಯುವ॥
    ರಚನೆ :ವಿಶ್ವೇಶ್ವರ ಭಟ್ ಉಂಡೆಮನೆ
    ಗಾಯನ :ಕಾರ್ತಿಕ ಶ್ಯಾಮ ಮುಂಡೋಳುಮೂಲೆ

КОМЕНТАРІ • 1

  • @vishweshwarabhat2110
    @vishweshwarabhat2110 8 місяців тому +1

    ತುಂಬ ಚೆನ್ನಾಗಿದೆ. ಕೇಳುವಂತಿದೆ.