Sundara Rakshakane accordion cover by Joshua Gabriel Ebenezer

Поділитися
Вставка
  • Опубліковано 27 сер 2024
  • Sundara Rakshakane is a traditional CSI kannada lyric composed by Rev.J Job Pal.
    CSI Kannada Lyric - 19
    ಕನ್ನಡ ಸಂಕೀರ್ತನೆ - 19
    ಸುಂದರ ರಕ್ಷಕನೇ - ನಿನ್ನ ವಂದಿತ ನಾಮವನೇ
    ಕುಂದದೆ ಕೀರ್ತಿಸಿ ಎಂದಿಗೂ ಹಾಡುತ
    ಬಂದು ಭಜಿಪೆವಯ್ಯಾ
    ನರರೊಳಲೈಪತಿಯೇ ನೀ ಪರಿಮಳವಾಸನೆಯೇ
    ಧರಣಿಯ ಭಕ್ತರ ಸ್ಮರಣೆಗೆ ಯೋಗ್ಯನು
    ನಿರುತವು ಸದ್ಗುರುವೇ - ಸುಂದರ -
    ಸಾಯದ ನರವರನೇ ನೀ ಗಾಯವ ಮಾಣಿಪನೇ
    ಮಾಯದ ಜಗದಲಿ ನೀಯೆಮಗಾಶ್ರಯ
    ಕಾಯೋ ವಿಮೋಚಕನೇ - ಸುಂದರ -
    ಪರಮದಯಾಕರನೇ ನೀ ಧರಣಿಯ ಭಾಸ್ಕರನೇ
    ನರರಿಗೆ ಮಾರ್ಗವು ವರಗಳ ಮೂಲವು
    ಕರುಣೆಯ ಸಾಗರನೇ - ಸುಂದರ -
    ಅಧಿಪತಿಯಾದವನೇ ನೀ ಮಧುರಕೃಪಾಮೃತನೇ
    ಬುಧರು ಸುಸೇವೆಯ ವಿವಿಧದಿ ಮಾಡಲು
    ಅಧಿಕ ಹರುಷಗೊಳಿಸೈ - ಸುಂದರ -
    ಅರಸನು ನೀನೆಮಗೆ ಅತಿಭರದಲಿ ನಿನ್ನೆಡೆಗೆ
    ಸ್ಮರಣೆಯ ಮಾಡುತ ಬರುವೆವು ಕರ್ತನೇ
    ಹರಸೆಮ್ಮ ನಾದರಿಸೈ - ಸುಂದರ -

КОМЕНТАРІ • 63