ಶಿವಮಾನಸ ಸ್ತೋತ್ರ

Поділитися
Вставка
  • Опубліковано 12 лют 2018
  • [ರಚನೆ: ಆದಿ ಶಂಕರಾಚಾರ್ಯ]
    ಭಾವಾರ್ಥ:
    "ರತ್ನಖಚಿತವಾದ ಆಸನವನ್ನು ನಿನಗಾಗಿ ಕಲ್ಪಿಸಿಟ್ಟಿದ್ದೇನೆ. ಹಿಮವತ್ಪರ್ವತದಿಂದ ಹರಿಯುವ ಶುದ್ಧ ನೀರನ್ನು ನಿನ್ನ ಸ್ನಾನಕ್ಕೆಂದು ತಂದಿದ್ದೇನೆ. ನಿನಗೆ ತೊಡಿಸಲು ದಿವ್ಯವಾದ ವಸ್ತ್ರಗಳು ಮತ್ತು ವಜ್ರವೈಡೂರ್ಯಾದಿ ಆಭರಣಗಳನ್ನು
    ಸಜ್ಜುಗೊಳಿಸಿದ್ದೇನೆ. ಅಂಗಲೇಪನಕ್ಕಾಗಿ ಕಸ್ತೂರಿಯ ಘಮ ಸೇರಿಸಿದ ಚಂದನ, ಜಾಜಿ ಮಲ್ಲಿಗೆ ಸಂಪಿಗೆಯೇ ಮೊದಲಾದ ಹೂವುಗಳು, ಬಿಲ್ವಪತ್ರೆ, ಧೂಪ, ದೀಪ - ಎಲ್ಲವನ್ನೂ ಹೃತ್ಪೂರ್ವಕವಾಗಿ, ನನ್ನ ಹೃತ್ಕಲ್ಪನೆಯಲ್ಲೇ ಸಿದ್ಧಗೊಳಿಸಿದ್ದೇನೆ.
    ನವರತ್ನಗಳ ಮೆರುಗಿನಿಂದ ಹೊಳೆಯುವ ಬಂಗಾರದ ಬೋಗುಣಿಯಲ್ಲಿ ಪಾಯಸ, ಹಾಲು-ತುಪ್ಪಗಳನ್ನು ಸೇರಿಸಿ ಮಾಡಿದ ಐದು ವಿಧದ ಭಕ್ಷ್ಯಗಳು, ಬಾಳೆಹಣ್ಣಿನ ರಸಾಯನ, ತರಕಾರಿ-ಕಂದಮೂಲಗಳಿಂದ ಮಾಡಿದ ರುಚಿಕರ
    ಪದಾರ್ಥಗಳು, ಕುಡಿಯಲು ಕರ್ಪೂರಸುಗಂಧಯುಕ್ತ ಜಲ, ಮೆಲ್ಲಲು ಪರಿಮಳದ್ರವ್ಯಭರಿತ ತಾಂಬೂಲ - ಇವೆಲ್ಲವೂ ನಿನ್ನ ಸೇವನೆಗಾಗಿ. ಅಷ್ಟೇ‌ಅಲ್ಲ, ವಿಶ್ರಾಂತಿಯ ವೇಳೆ ನಿನ್ನ ಸೇವೆಗಾಗಿ ಛತ್ರ-ಚಾಮರಗಳಿವೆ, ಗಾಳಿಯಾಡಿಸಲು
    ಬೀಸಣಿಕೆಯಿದೆ, ಮುಖದರ್ಶನಕ್ಕೆ ಕನ್ನಡಿಯಿದೆ. ನಿನ್ನ ಮನರಂಜನೆಗೆಂದು ವೀಣೆ-ಮೃದಂಗ-ಢಕ್ಕೆ-ಡಮರುಗಳೊಂದಿಗೆ ಗೀತನೃತ್ಯಗೋಷ್ಠಿಯನ್ನೂ ಮಂತ್ರಘೋಷವನ್ನೂ ಆಯೋಜಿಸಿದ್ದೇನೆ. ನಾನು ಭಕ್ತಿಯಿಂದ, ಮನೋಶಕ್ತಿಯಿಂದ
    ಅರ್ಪಿಸುತ್ತಿರುವ ಇವೆಲ್ಲವನ್ನೂ ದಯಮಾಡಿ ಸ್ವೀಕರಿಸು. ಶಂಭೋಶಂಕರನೇ ನಿನಗೆ ಸಾಷ್ಟಾಂಗ ವಂದನೆ ಸಮರ್ಪಿಸುತ್ತೇನೆ. ನನ್ನ ಆತ್ಮವೆಂದರೆ ನೀನೇ. ಬುದ್ಧಿಯೇ ಗಿರಿಜೆ. ನನ್ನ ಪಂಚಪ್ರಾಣಗಳು ನಿನ್ನ ಕಿಂಕರರು. ನನ್ನ ಶರೀರ ನಿನ್ನ
    ಮಂದಿರ. ಇಂದ್ರಿಯಭೋಗವೇ ನಿನ್ನ ಪೂಜೆ. ನಿದ್ರೆಯೇ ಸಮಾಧಿ, ನಡಿಗೆಯೇ ಪ್ರದಕ್ಷಿಣೆ. ನನ್ನ ಮಾತುಗಳೆಲ್ಲ ನಿನ್ನದೇ ಸ್ತೋತ್ರವಾದರೆ ನಾನು ಮಾಡುವುದೆಲ್ಲವೂ ನಿನ್ನ ಆರಾಧನೆ!"

КОМЕНТАРІ • 7