ಆ ಕಾಲದ ಅಭಿನೇತ್ರಿಯರ ಜೊತೆ ಈ ಕಾಲದ ಗ್ಲಾಮರ್ ಡಾಲ್ಸ್..! | Actress Tara | Doctorate Award | Guarantee News

Поділитися
Вставка
  • Опубліковано 9 лют 2025
  • ರಾಜ್ಯ ಪ್ರಶಸ್ತಿ ವಿಜೇತ ಹಿರಿಯನಟಿ ತಾರಾ, ಸಿನಿಮಾ ಹಾಗೂ ರಾಜಕಾರಣ ಎರಡರಲ್ಲೂ ಸಕ್ರಿಯರಾಗಿರೋ ಅದ್ಭುತ ಪ್ರತಿಭೆ. ವೆರೈಟಿ ಜಾನರ್ ಆಫ್ ಸಿನಿಮಾಗಳಿಂದ ಎಂಥದ್ದೇ ಪಾತ್ರ ನೀಡಿದರೂ ಅದಕ್ಕೆ ಜೀವ ತುಂಬಬಲ್ಲಂತಹ ಅತ್ಯದ್ಭುತ ಕಲಾವಿದೆ. ಸದ್ಯ ಅವರ ಚಿತ್ರರಂಗದ ಸೇವೆ ಗುರ್ತಿಸಿ, ಬಿಜಾಪುರದ ಅಕ್ಕಮಹಾದೇವಿ ಮಹಿಳಾ ಯೂನಿವರ್ಸಿಟಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಅದನ್ನ ಸ್ವತಃ ರಾಜ್ಯದ ಮೊಲದ ಪ್ರಜೆಯಾದ ಥಾವರ್ ಚಂದ್ ಗೆಹ್ಲೋಟ್ ಮೂಲಕ ಗೌರವಿಸಲಾಯಿತು. ಇನ್ನು ಅದಾದ ಬಳಿಕ ನಟಿ ಡಾ. ತಾರಾ ಮನೆಯಲ್ಲಿ ಸಂಭ್ರಮವೋ ಸಂಭ್ರಮ. ಹೌದು.. ಡಾಕ್ಟರೇಟ್ ಪಡೆದ ಡಾ.ತಾರಾರನ್ನ ಅಭಿನಂದಿಸಲು ಇಡೀ ಚಿತ್ರರಂಗ ಒಂದಾಗಿದೆ. ಇದೇ ಜನವರಿ 15ರಂದು ಜೆಪಿ ನಗರದ ಡಾ. ತಾರಾ ನಿವಾಸದಲ್ಲಿ ಮಧ್ಯಾಹ್ನ ಒಂದು ಸಂತೋಷ ಕೂಟ ನಡೆದಿದೆ. ಅಲ್ಲಿ ಆ ಕಾಲದ ಹಿರಿಯ ಅಭಿನೇತ್ರಿಯರಿಂದ ಹಿಡಿದು, ಇಂದಿನ ಜನರೇಷನ್ ನ ಟಾಪ್ ನಟೀಮಣಿಯರವರೆಗೆ ಎಲ್ಲರೂ ಉಪಸ್ಥಿತರಿದ್ದಾರೆ.
    ಇನ್ನು ಈ ವಿಷಯವನ್ನ ಗ್ಯಾರಂಟಿ ನ್ಯೂಸ್ ಜೊತೆ ಹಂಚಿಕೊಂಡ ನಟಿ ಡಾ. ತಾರಾ, ಯಾರೆಲ್ಲಾ ಬಂದಿದ್ದರು ಅನ್ನೋದನ್ನ ಖುಷಿಯಿಂದ ಹೊರಹಾಕಿದರು. ಇತ್ತೀಚೆಗೆ ಹೊರಗೆಲ್ಲೂ ಬಾರದ ಭಾರತಿ ವಿಷ್ಣುವರ್ಧನ್, ಸುಧಾರಾಣಿ, ಜಯಮಾಲಾ, ಶ್ರುತಿ, ಮಾಲಾಶ್ರೀ, ಮಾಳವಿಕಾ, ಅಂಜಲಿ, ಸಾಂಘವಿ, ಸುಧಾ ನರಸಿಂಹರಾಜು, ತ್ರಿವೇಣಿ, ಉಮಾ, ಹೇಮಾ ಚೌಧರಿ, ಸುಮಿತ್ರಮ್ಮ, ಅಮೂಲ್ಯ, ಭಾವನಾ ರಾಮಣ್ಣ, ಸೋನು ಗೌಡ, ಭಾವನಾ ರಾವ್, ವೀಣಾ ಸುಂದರ್, ಸುಧಾ ಬೆಳವಾಡಿ, ಪಲ್ಲವಿ ಗುರುಕಿರಣ್, ಪ್ರಿಯಾಂಕಾ ಉಪೇಂದ್ರ, ಕಾರುಣ್ಯ ರಾಮ್, ಸುಜಾತಾ, ಪೂಜಾ ಗಾಂಧಿ, ಅನು ಪ್ರಭಾಕರ್ ಹೀಗೆ ಇಡೀ ಕನ್ನಡ ಚಿತ್ರರಂಗದ ಎಲ್ಲಾ ಮಹಿಳಾ ಮಣಿಗಳು ಒಂದೇ ಸೂರಿನಡಿ ಸೇರಿ, ಡಾ. ತಾರಾ ಅವರಿಗೆ ಅಭಿನಂದಿಸಿದ್ದಾರೆ. ಅದರ ಅವಿಸ್ಮರಣೀಯ ಕ್ಷಣಗಳ ವಿಡಿಯೋ ಝಲಕ್ ಇಲ್ಲಿದೆ ನೋಡಿ.
    #tara #doctarateaward #thawarchandgehlot #sandalwood #actress #kannadacinima #kannadanewslive #radhahiregoudar #guaranteenews #guaranteenewskannada

КОМЕНТАРІ • 9

  • @jabeentaj9474
    @jabeentaj9474 21 день тому +3

    Abinandanegalu dr Tara madam 🎉🎉🎉🎉❤❤

  • @chaithra6917
    @chaithra6917 20 днів тому

    Congratulations mam,,always old is gold ,,n happy to see u people together,,

  • @lakshmisumanth6826
    @lakshmisumanth6826 21 день тому

    So nice to see all friends of kannada industry together in one frame.... Congratulations Taramma🎉🎉.... U all should plan once in few months, meet and hv fun the whole day.... And we will enjoy seeing yr videos..... Sudha Belvadi is my mahila seva samaja high school classmate. Good luck to all of you.

  • @kusumagk2675
    @kusumagk2675 21 день тому +1

    ಅಭಿನಂದನೆಗಳು ತಾರಾ ಮೇಡಂ

  • @PushpaBorashetti-sb2uv
    @PushpaBorashetti-sb2uv 21 день тому

    Abhinandan madam Tara madam

  • @PushpaBorashetti-sb2uv
    @PushpaBorashetti-sb2uv 21 день тому

    0:19 abhinandana galu madam

  • @sumanaregal2821
    @sumanaregal2821 20 днів тому

    Tumba Tumba Sbhinandanegalu Tara Madam

  • @PradeepEvoor
    @PradeepEvoor 23 дні тому +1

    ಅಭಿ ವಂದನೆಗಳು ಮೇ ಡಂ