ಭಯವೇ ನಮ್ಮ ನಿಜವಾದ ದೌರ್ಭಾಗ್ಯ । Over coming life | ಅವಧೂತ ಶ್ರೀ ವಿನಯ್ ಗುರೂಜಿ

Поділитися
Вставка
  • Опубліковано 13 чер 2021
  • ಭಯವೇ ನಮ್ಮ ನಿಜವಾದ ದೌರ್ಭಾಗ್ಯ । Over coming life | ಅವಧೂತ ಶ್ರೀ ವಿನಯ್ ಗುರೂಜಿ
    ಮಾನವನು ಮೋಕ್ಷವನ್ನು ಪಡೆಯಬೇಕು ಎಂದಾದರೆ ಅವನು ಅತಿ ಹೆಚ್ಚು ತ್ಯಾಗದಲ್ಲಿ ಒಂದಾಗಿರಬೇಕು. ಜೀವಿಸುವಂತಹ ಪ್ರತಿಯೊಂದು ಜೀವಿಯೂ ತನ್ನನ್ನು ಲೋಕ ಕಲ್ಯಾಣದ ಕೆಲಸಗಳಲ್ಲಿ ಕೈ ಜೋಡಿಸಿದರೆ ಕೊರೋನದಂತಹ ಯಾವುದೇ ಪರಿಸ್ಥಿತಿ ಬಂದರು ಜಗ್ಗಲು ಸಾಧ್ಯವಿಲ್ಲ. ನಾವು ಜೀವಿಸುವ ಪ್ರತಿಯೊಂದು ಕ್ಷಣವು ಇನ್ನೊಬ್ಬರಿಗೆ ಉಪಕಾರವನ್ನೇ ಭಯಸುವುದಾದರೆ ಅಲ್ಲಿ ಮಾನವನ ಬದುಕಿಗೆ ಸಾರ್ಥಕತೆ ಲಬಿಸುತ್ತದೆ.
    ಸಂಘದ ಜೊತೆ ಎಲ್ಲರೂ ಕೈಗೂಡಿದರೆ ಅಸಾಧ್ಯದ ಪರಿಸ್ಥಿತಿಯೂ ಸಲಭವಾಗಿ ಸಾಧ್ಯವಾಗಿಬಿಡುತ್ತದೆ. ಸಮಾಜಸೇವಾ ಭಾವನೆ ಎಲ್ಲರ ಮನಸ್ಸಿನಲ್ಲು ಮೆನೆ ಮಾಡಿದಾಗ ಇನ್ನೊಬ್ಬರಿಗೆ ಸ್ಪೋರ್ತಿಯಾಗಿ, ತಮ್ಮನ್ನು ಜನಸೇವೆಗಾಗಿ ತೊಡಗಿಸಿಕೊಂಡಿರುವ ಕೊರೋನ ವಾರಿಯರ್ಸ್ ಗಳಿಗೆ ಹೆಮ್ಮೆಯ ವಿಷಯವಾಗುತ್ತದೆ. ಇನ್ನೊಬ್ಬರನ್ನು ಪ್ರೇರೇಪಿಸುವ ಕೆಲಸಗಳು ಇನ್ನಷ್ಟು ಹೆಚ್ಚಾಗಬೇಕು. ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ತೀರ್ಮಾನ ಮಾಡಿದರೆ ಎಂದಿಗೂ ಜೀವಕ್ಕೆ ಅಂಜಬೇಡಿ. ಯಾಕೆಂದರೆ ಭಯವೇ ನಮ್ಮ ನಿಜವಾದ ದೌರ್ಭಾಗ್ಯ. ಧೈರ್ಯದಿಂದ ಮುನ್ನುಗ್ಗಿ ದರೆ ಮಾತ್ರ ನಮಗೆ ಉನ್ನತ ಮಾರ್ಗ ದೊರೆಯಲು ಸಾಧ್ಯವಾಗುತ್ತದೆ.
    ನಮ್ಮ ಭಾರತ ಸಂಸ್ಕೃತಿಯೂ ಬಹಳ ಹೆಮ್ಮೆಯನ್ನು ಹುಟ್ಟುಹಾಕುವಂತಹದ್ದು, ಅದನ್ನು ನಾವು ಇಂದಾದರೂ ಅನುಸರಿಸಬೇಕಾಗಿದೆ. ನಮ್ಮ ಉತ್ತಮ ಸಮಯವನ್ನು ನಾವೇ ವೈರಿಯಾಗಿ ಮಾಡಿಕೊಳ್ಳುವುದು ಬೇಡ. ಹಣದ ಹಿಂದೆ ಓಡುವುದು ಬೇಡ. ಕಲಿಕೆ ಜಗದ ನಿಯಮ ಹಾಗಂತ ನಮ್ಮ ತನವನ್ನು ನಾವು ಬಿಡುವುದು ಬೇಡ. ನಾವು ದೃಢವಾಗಿ ನಿರ್ಧಾರ ಮಾಡಿದರೆ ಯಾವುದಾದರೂ ಅಸಾಧ್ಯವಾದುದಲ್ಲ.
    ಸಮಯ ಹಾಳು ಮಾಡುವುದು ಬೇಡ. ವಿವೇಕದಿಂದ ಯೋಚಿಸೋಣ. ಸಂಘಟನೆಗೆ ಪ್ರೋತ್ಸಾಹಿಸೋಣ ಅದರಿಂದ ಎಲ್ಲಾ ಕೆಲಸಗಳು ಸುಲಭವಾಗಿಬಿಡುತ್ತವೆ. ಸೇವಾ ಭಾವನೆಯೂ ದೇಶದ ಪ್ರತಿಯೊಬ್ಬ ಪ್ರಜೆಯ ಆಸ್ತಿ, ದೇಶಕ್ಕಾಗಿ ಎಲ್ಲರೂ ದುಡಿದಾಗ ಭಾರತದಲ್ಲಿ ಎಲ್ಲವೂ ಸುಲಭವಾಗಿಬಿಡುತ್ತದೆ- ಅವಧೂತ ಶ್ರೀ ವಿನಯ್ ಗುರೂಜಿ.

КОМЕНТАРІ • 96