Ilkal saree Business: ಇಳಕಲ್‌ ಸೀರೆ, ಗುಳೇದಗುಡ್ಡದ ಖಣಕ್ಕೆ ವಿದೇಶದಲ್ಲೂ ಬೇಡಿಕೆ | Vijay Karnataka

Поділитися
Вставка
  • Опубліковано 11 гру 2022
  • ಬಾಗಲಕೋಟೆ: ಇಳಕಲ್‌ ಸೀರೆ , ಗುಳೇದಗುಡ್ಡದ ಖಣ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ? ದೇಶ ವಿದೇಶದಲ್ಲೂ ಇಳಕಲ್‌ ಸೀರೆಗೆ ಬೇಡಿಕೆ ಇದೆ. ಜೊತೆಗೆ ಗುಳೇದಗುಡ್ಡ ಖಣ, ಅಂದ್ರೆ ಬ್ಲೌಸ್‌ನ ಬಟ್ಟೆ ಸಹ ಅಷ್ಟೇ ಪ್ರಸಿದ್ಧಿ. ಯುವತಿಯರು, ಮಹಿಳೆಯರು ಒಮ್ಮೆಯಾದರೂ ಅವುಗಳನ್ನು ಧರಿಸಿ ಮಿಂಚಬೇಕು ಎಂದು ಬಯಸುತ್ತಾರೆ.
    ಬಾಗಲಕೋಟೆ ನಗರದಿಂದ ಕೇವಲ 25 ಕಿಲೋಮೀಟರ್ ಅಂತರದಲ್ಲಿ ಗುಳೇದಗುಡ್ಡ ಪಟ್ಟಣ ಸಿಗುತ್ತೆ. ಈ ಊರಿಗೆ ಖಣಗಳ ಊರು ಅಂತಲೂ ಕರೆಯುವುದುಂಟು. ಇಲ್ಲಿನ ಜನರ ಮೂಲ ಉದ್ಯೋಗ ನೇಕಾರಿಕೆ, ನೇಕಾರಿಕೆಯ ಮೇಲೆ ಹೆಚ್ಚು ಜನರು ಅವಲಂಬಿತರಾಗಿದ್ದಾರೆ. ಈ ಪಟ್ಟಣದ ಯಾವುದೇ ರಸ್ತೆಗೆ ಹೋದ್ರ ಕೈಮಗ್ಗದ ಸಪ್ಪಳ ಕೇಳಿ ಬರುತ್ತೆ. ರಾಜ್ಯದಲ್ಲೇ ರೇಷ್ಮೆ ಖಣ ತಯಾರಿಸುವ ಏಕೈಕ ಪಟ್ಟಣ ಎಂಬ ಹೆಗ್ಗಳಿಕೆಗೂ ಈ ಊರು ಪಾತ್ರವಾಗಿದೆ.
    ಒಂದು ಶತಮಾನದಿಂದಲೂ ಸಂಪತಕುಮಾರ ರಾಠಿ ಎಂಬುವರು ಕುಟುಂಬದವರು ಗುಳೇದಗುಡ್ಡ ಖಣ ಮತ್ತು ಇಲಕಲ್‌ ಸೀರೆ ವ್ಯಾಪಾರ ಮಾಡುತ್ತಿದ್ದಾರೆ. ವಿದೇಶಕ್ಕೂ ಇಲ್ಲಿಂದ ಸೀರೆ, ಖಣವನ್ನು ರಫ್ತು ಮಾಡುತ್ತಿದ್ದಾರೆ. ನೆರೆಯ ಮಹಾರಾಷ್ಟ್ರ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಬೇಡಿಕೆ ಇದೆ. ಈ ಗುಳೇದಗುಡ್ಡ ಖಣದಲ್ಲಿ ಹೊಸ ಹೊಸ ವಿನ್ಯಾಸಗಳನ್ನು ಸಿದ್ಧಪಡಿಸಲಾಗಿದ್ದು, 20 ರಿಂದ 25 ಬಗೆಯ ಖಣಗಳು ಕಾಣಸಿಗುತ್ತವೆ.
    #bagalkot #ilkalsaree
    Our Website: Vijaykarnataka.com
    Facebook: / vijaykarnataka
    Twitter: / vijaykarnataka

КОМЕНТАРІ • 5