ALuva KadaLoLu Teli Barutalide /ಅಳುವ ಕಡಲೊಳು ತೇಲಿ ಬರುತಲಿದೆ

Поділитися
Вставка
  • Опубліковано 16 чер 2020
  • Song : ಅಳುವ ಕಡಲೊಳು ತೇಲಿ ಬರುತಲಿದೆ / Aluva kadalolu teli barutalide
    Written by: M. Gopala Krishna Adiga
    Music Composed by : P. Kalinga Rao
    Sung by: Anitha Ananthaswamy-Baru
    ಅಳುವ ಕಡಲೊಳು ತೇಲಿ ಬರುತಲಿದೆ
    ನಗೆಯ ಹಾಯಿ ದೋಣಿ |
    ಬಾಳ ಗಂಗೆಯ ಮಹಾ ಪೂರದೊಳು
    ಸಾವಿನೊಂದು ವೇಣಿ ||
    ನೆರೆತಿದೆ ಬೆರೆತಿದೆ ಕುಣಿವ ಮೊರೆವ
    ತೆರೆ ತೆರೆಗಳೋಳಿಯಲ್ಲಿ |
    ಜನನ ಮರಣಗಳ ಉಬ್ಬುತಗ್ಗು ಹೊರ
    ಳುರುಳುವಾಟವಲ್ಲಿ ||
    ಆಶೆ ಬೂದಿ ತಳದಲ್ಲು ಕೆರಳುತಿವೆ
    ಕಡಿಗಳೆನಿತೋ ಮರಳಿ |
    ಮುರಿದು ಬಿದ್ದ ಮನ ಮರದ ಕೊರಳು
    ಹೂವು ಅರಳಿ ಅರಳಿ ||
    ಕೂಡಲಾರದೆದೆಯಾಳದಲ್ಲೂ
    ಕಂಡೀತು ಏಕಸೂತ್ರ |
    ಕಂಡುದುಂಟು ಬೆಸೆದೆದೆಗಳಲ್ಲು
    ಭಿನ್ನತೆಯ ವಿಕಟ ಹಾಸ್ಯ ||
    ಎತ್ತರೆತ್ತರೆಕೆ ಏರುವ ಮನಕೂ
    ಕೆಸರ ಲೇಪ, ಲೇಪ |
    ಕೊಳೆಯು ಕೊಳೆಚೆಯಲಿ ಮುಳುಗಿ ಕಂಡನೋ
    ಬಾನಿನೊಂದು ಪೆಂಪ ||
    ತುಂಬುಗತ್ತಲಿನ ಬಸಿರನಾಳುತಿದೆ
    ಒಂದು ಅಗ್ನಿ ಪಿಂಡ |
    ತಮದಗಾಧ ಹೊನಲಲ್ಲು ಹೊಳೆಯುತಿದೆ
    ಸತ್ವವೊಂದಖಂಡ ||
    ಆಶೆಯೆಂಬ ತಳವೊಡೆದ ದೋಣಿಯಲಿ
    ದೂರತೀರಯಾನ |
    ಯಾರ ಲೀಲೆಗೋ ಯಾರೋ ಏನೋ ಗುರಿ
    ಯಿರದೆ ಬಿಟ್ಟ ಬಾಣ ||
    ಇದು ಬಾಳು ನೋಡು ಇದ ತಿಳಿದೆನೆಂದರೂ
    ತಿಳಿದ ಧೀರನಿಲ್ಲ |
    ಹಲವುತನದ ಮೈ ಮರೆಸುವಾತವಿದು
    ನಿಜವು ತೋರದಲ್ಲ ||
    ಬೆಂಗಾರು ನೋಡು ಇದು ಕಾಂಬ ಬಯಲು
    ದೊರೆತಿಲ್ಲ ಆದಿ ಅಂತ್ಯ|
    ಇದ ಕುಡಿದೆನೆಂದ ಹಲರುಂಟು
    ತಣಿದೆನೆಂದವರ ಕಾಣಲಿಲ್ಲ||
    ಅರೆ ಬೆಳಕಿನಲ್ಲಿ ಬಾಳಲ್ಲಿ ಸುತ್ತಿ
    ನಾವೇಕೊ ಮಲೆತು ಕಲೆತು
    ಕೊನೆಗೆ ಕರಗುವೆವು ಮರಣ ತೀರ ಘನ
    ತಿಮಿರದಲ್ಲಿ ಬೆರೆತು ||

КОМЕНТАРІ •