1999ರ ಕಾರ್ಗಿಲ್ ಯುದ್ಧಕ್ಕೆ ಪಾಕಿಸ್ತಾನ ಹೊಣೆ - ಪಾಕಿಸ್ತಾನ ಸೇನಾ ಮುಖ್ಯಸ್ಥರ ಒಪ್ಪಿಗೆ

Поділитися
Вставка
  • Опубліковано 6 вер 2024
  • 1999ರ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೇನೆಯು ನೇರವಾಗಿ ಭಾಗಿಯಾಗಿತ್ತು ಎಂದು ಇದೇ ಮೊದಲ ಬಾರಿಗೆ ಪಾಕಿಸ್ತಾನ ಸೇನಾ ಮುಖ್ಯಸ್ಥರು ಒಪ್ಪಿಕೊಂಡಿದ್ದಾರೆ.
    ರಾವಲ್ಪಂಡಿಯಲ್ಲಿ ನಡೆದ ಪಾಕಿಸ್ತಾನ ರಕ್ಷಣಾ ದಿವಸ್ ನಲ್ಲಿ ಪಾಲ್ಗೊಂಡಿದ್ದ ಸೇನಾ ಮುಖ್ಯಸ್ಥ ಜನರಲ್ ಆಸೀಮ್ ಮುನೀರ್ ಅವರು, 1948, 1965,1971 ಹಾಗೂ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನವು ಭಾರತವನ್ನು ಎದುರಿಸಿದೆ. ಈ ವೇಳೆ ತಮ್ಮ ಸಾವಿರಾರು ಸೈನಿಕರು ಹುತಾತ್ಮರಾಗಿದ್ದಾರೆ.
    ದೇಶ ಹಾಗೂ ಇಸ್ಲಾಂಗಾಗಿ ನಾವು ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಬೇಕಾಯಿತು ಎಂದು ಜನರಲ್ ಮುನೀರ್ ಹೇಳಿದರು.
    ಕಳೆದ 25 ವರ್ಷಗಳಲ್ಲಿ ಕಾರ್ಗಿಲ್ ಯುದ್ಧದಲ್ಲಿ ತಾನು ನೇರವಾಗಿ ಭಾಗಿಯಾಗಿಲ್ಲ ಎಂದು ಪಾಕಿಸ್ತಾನ ಸೇನೆ ಪ್ರತಿಪಾದಿಸಿತ್ತು. ಇದೀಗ ಜನರಲ್ ಮುನೀರ್ ಹೇಳಿಕೆಯಿಂದಾಗಿ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನ ಸೇನೆಯ ಪಾತ್ರ ಏನೆಂಬುದು ಸ್ಪಷ್ಟವಾಗಿದೆ.
    **
    #LiveDDChandanaNews #DDChandanaNews #DDChandana #DDKannada

КОМЕНТАРІ •