ಪಾಲಕ್ ರೈಸ್ | Healthy and Quick Palak rice| Palak rice recipe | Easy Breakfast recipe |

Поділитися
Вставка
  • Опубліковано 15 вер 2024
  • ಪಾಲಕ್ ರೈಸ್ | Healthy and Quick Palak rice| Palak rice recipe | Easy Breakfast recipe | #palakrice
    ಕುದಿಯುವ ನೀರಿಗೆ 2 ಕಟ್ಟು ಪಾಲಕ್ ಸೊಪ್ಪು ಹಾಕಿ 1ಕುದಿ ಬಂದ ನಂತರ ಪಾಲಕ್ ಸೊಪ್ಪು ತೆಗೆದು ತಣ್ಣೀರಿಗೆ ಹಾಕಿ 2 ನಿಮಿಷದ ನಂತರ ಸೊಪ್ಪನ್ನು ಮಿಕ್ಸಿ ಜಾರಿಗೆ ಹಾಕಿ 3ಹಸಿರುಮೆಣಸಿನಕಾಯಿ, ಅರ್ಧ ಇಂಚು ಹಸಿ ಶುಂಠಿ, 1ಗಡ್ಡೆ ಬೆಳ್ಳುಳ್ಳಿ ಹಾಕಿ ರುಬ್ಬಿ ಇಟ್ಟುಕೊಳ್ಳಿ.ನಂತರ ಬಾಣಲೆಗೆ 4ಟೀಸ್ಪೂನ್ ಎಣ್ಣೆ ಹಾಕಿ ಕಾದ ನಂತರ 50 ಗ್ರಾಂ ಶೇಂಗಾ ಬೀಜ ಸ್ವಲ್ಪ ಗೋಡಂಬಿ ಹಾಕಿ ಫ್ರೈ ಮಾಡಿ ತೆಗೆದಿಟ್ಟುಕೊಳ್ಳಿ.ನಂತರ ಅದೇ ಬಾಣಲೆಗೆ 3 ಟೀ ಸ್ಪೂನ್ ತುಪ್ಪ ಹಾಕಿ ಸ್ವಲ್ಪ ಸಾಸಿವೆ ಹಾಕಿ 1 ಟೀ ಸ್ಪೂನ್ ಜೀರಿಗೆ ಹಾಕಿ ಆಮೇಲೆ ಸ್ವಲ್ಪ ಸೋಂಪು ಕಾಳು ಹಾಕಿ ನಂತರ ಪಲಾವ್ ಎಲೆ,2 ಏಲಕ್ಕಿ,3 ಲವಂಗ,4-5 ಕರಿಮೆಣಸಿನ ಕಾಳು ಹಾಕಿ ಸ್ವಲ್ಪ ಚೆಕ್ಕೆ ಹಾಕಿ ಮದ್ಯಮ ಉರಿಯಲ್ಲಿ ಫ್ರೈ ಮಾಡಿ ನಂತರ 1 ಕಟ್ ಮಾಡಿದ ಈರುಳ್ಳಿ ಹಾಕಿ 1 ಕಟ್ ಮಾಡಿದ ಟೊಮೆಟೊ ಸ್ವಲ್ಪ ಕರಿಬೇವು ಹಾಕಿ ಬಾಡಿಸಿ.ಈಗ ಪಾಲಕ್ ಪೇಸ್ಟ್ ಹಾಕಿ ಫ್ರೈ ಮಾಡಿ. ನಂತರ ಅರ್ಧ ಟೀ ಸ್ಪೂನ್ ಅರಶಿನ ಪುಡಿ ಸೇರಿಸಿ ಅರ್ಧ ಟೀ ಸ್ಪೂನ್ ದನಿಯಾ ಪುಡಿ ಹಾಕಿ ಅರ್ಧ ಟೀ ಸ್ಪೂನ್ ಗರಂ ಮಸಾಲ ಪುಡಿ ಹಾಕಿ ಎಣ್ಣೆ ಬಿಡುವವರೆಗೂ ಫ್ರೈ ಮಾಡಿ ನಂತರ ಮಾಡಿರುವ ಅನ್ನ ಹಾಕಿ ಮಿಕ್ಸ್ ಮಾಡಿ ನಂತರ ಫ್ರೈ ಮಾಡಿಟ್ಟ ಗೋಡಂಬಿ, ಶೇಂಗಾ ಸೇರಿಸಿ ಉಪ್ಪು ನಿಂಬೆರಸ ಸೇರಿಸಿ ಚೆನ್ನಾಗಿ ಬೆರೆಯುವಂತೆ ಮಿಕ್ಸ್ ಮಾಡಿದರೆ ರುಚಿಯಾದ ಆರೋಗ್ಯಕರವಾದ ಪಾಲಕ್ ರೈಸ್ ರೆಡಿ ಸರ್ವ್ ಮಾಡಿ.

КОМЕНТАРІ • 1