ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ | ಶ್ರೀ ರಾವಳ್ ಮಾಸ್ತರ್ ಅವರ ಹಳೆಯ ಭಜನಾ ಕ್ಯಾಸೆಟದಿಂದ ಆಯ್ದ ಭಜನಾ ಪದ

Поділитися
Вставка
  • Опубліковано 9 лис 2024

КОМЕНТАРІ • 6

  • @kittappakelageri2480
    @kittappakelageri2480 9 місяців тому +4

    ಹಾಗೆ ಯಾವ ರಾಗ ಎಂದು ಅದನ್ನು ಬರೆದು ಹಾಕಿ ಕಲಿಯುವರಿಗೆ ಸಹಾಯ ಆಗುತ್ತದೆ

  • @kittappakelageri2480
    @kittappakelageri2480 9 місяців тому +3

    👌👌👌❤ ಹೀಗೆ ಪದಗಳನ್ನು ತೋರಿಸಿದ್ದಕ್ಕೆ ಧನ್ಯವಾದಗಳು ಎಲ್ಲಾ ಪದಗಳನ್ನು ಹೇಗೆ ತೋರಿಸಿ🙏🙏

  • @shivanandnaik7406
    @shivanandnaik7406 9 місяців тому +2

    ಪುರಂದರ ದಾಸರ ಈ ಪದ ಇಷ್ಟು ದಿನ ಎಲ್ಲಿ ಇತ್ತು ನನಗೆ ಗೊತ್ತೇ ಇರಲಿಲ್ಲ ಈ ಹಾಡನ್ನು ಹಾಡಿ ಎಲ್ಲರಿಗೂ ಕೇಳಿಸಿದ್ದಾಕ್ಕಾಗಿ ತುಂಬಾ ಧನ್ಯವಾದಗಳು ❤❤

    • @rajeshhukkeri
      @rajeshhukkeri  9 місяців тому +1

      ಹೆತ್ತ ತಾಯಿ ತಂದೆಗಳ ಚಿತ್ತವ ನೋಯಿಸಿ
      ನಿತ್ಯ ದಾನವ ಮಾಡಿ ಫಲವೇನು?
      ಸತ್ಯ ಸದಾಚಾರ ಇಲ್ಲದವನು ಜಪ
      ಹತ್ತು ಸಾವಿರ ಮಾಡಿ ಫಲವೇನು?||೧||
      ತನ್ನ ಸತಿ ಸುತರು ಬಂಧುಗಳ ನೋಯಿಸಿ
      ಚಿನ್ನ ದಾನವ ಮಾಡಿದರೆ ಫಲವೇನು?
      ಬಿನ್ನಣದಿಂದಲಿ ದೇಶ ದೇಶವ ತಿರುಗಿ
      ಅನ್ನ ದಾನವ ಮಾಡಿ ಫಲವೇನು?||೨||
      ಗೌಪ್ಯ ಗುಣ ಗುಟ್ಟು ಇಲ್ಲದ ಹೆಣ್ಣಿಗೆ
      ರೂಪ ಯೌವನವಿದ್ದು ಫಲವೇನು?
      ತಾಪತ್ರಯದ ಸಂಸಾರ ಕೆಡಿಸುವಂಥ
      ಪಾಪಿ ಮಗನು ಇದ್ದು ಫಲವೇನು? ||೩||
      ತಾಂಡವ ಧನದಿಂದ ತಂದೆ ಮಾತು ಕೇಳದ
      ತುಂಡು ಮಗನು ಇದ್ದು ಫಲವೇನು?
      ಭಂಡುಮಾಡಿ ಅತ್ತಿ ಮಾವನ ಬೈವ
      ಮಂಡ ಸೊಸೆಯಿದ್ದು ಫಲವೇನು? ||೪||
      ಸ್ನಾನಕ್ಕೆ ಪಾನಕ್ಕೆ ಆಗುವ ತಿಳಿನೀರು
      ಕಾನನದೊಳಗಿದ್ದು ಫಲವೇನು?
      ಆನಂದ ಮೂರುತಿ ಪುರಂದರ ವಿಠಲನ
      ನೆನೆಯದ ತನುವಿದ್ದು ಫಲವೇನು? ||೫||

  • @ningappapatil9712
    @ningappapatil9712 9 місяців тому +2

    Good singing