ಬಯಲು ಆಲಯದ ಚಿದಂಬರ ರಹಸ್ಯ !!| ಶ್ರೀ ಖಡ್ಗೇಶ್ವರೀ ಬ್ರಹ್ಮಸ್ಥಾನ | Sri Khadgeswari Brahmasthan, Padubidri | UV

Поділитися
Вставка
  • Опубліковано 5 лют 2025
  • #Dakkebali #padubidri
    #khadgeshwaribrahmastana
    #Udayavani
    ಕಟ್ಟಡ ಪ್ರಧಾನವಾಗದೆ ’ಕಟ್ಟಳೆಗಳೇ’ ಮುಖ್ಯವಾಗಿರುವ ಆದಿಮ ಆಚರಣೆಯ ಸತ್ವಗಳನ್ನು ಉಳಿಸಿಕೊಂಡು, ಬದಲಾವಣೆಯ ಯಾವುದೇ ಸುಳಿಗೆ ಸಿಗದೆ ತನ್ನ ಮೂಲ ಸ್ವರೂಪದಲ್ಲಿ ಸಂಪ್ರದಾಯಬದ್ಧವಾಗಿ ಆಚರಣೆಗಳ ವೈವಿಧ್ಯಗಳೊಂದಿಗೆ ಪಡುಬಿದ್ರಿಯ ’ಬ್ರಹ್ಮಸ್ಥಾನ’ವು
    (ಬೆರ್ಮಸ್ಥಾನ ) ರಾಜ್ಯದಾದ್ಯಂತ ಆಸ್ತಿಕರ, ಚಿಂತಕರ, ವಾಸ್ತವವಾದಿಗಳ, ಸಂಶೋಧಕರ ಗಮನಸೆಳೆದ ಶ್ರದ್ಧಾಕೇಂದ್ರ.ಇಲ್ಲಿ ನಡೆಯುವ ರೋಚಕ ವಿಧಿಗಳ ವಿಲಕ್ಷಣ ಆರಾಧನಾ ವಿಧಾನವನ್ನು ಸ್ಥೂಲವಾಗಿ ಗಮನಿಸಿದರೆ ಏನೂ ತಿಳಿಯದು. ಆದರೆ ಸೂಕ್ಷ್ಮ ಅವಲೋಕನದಿಂದ ಎಲ್ಲವೂ ಒಗಟಾಗುತ್ತಾ ವಿವರಗಳು ನಿಗೂಢವಾಗುತ್ತವೆ. ಆದುದರಿಂದಲೇ ಈ ಆರಾಧನಾ ಸನ್ನಿಧಾನವು ವಿಭಿನ್ನ ಸ್ತರಗಳ ಜನರ ಆಸಕ್ತಿಯನ್ನು ಕೆರಳಿಸುತ್ತದೆ.
    ಇಲ್ಲಿ ನೆರವೇರುವ ಕೇವಲ ಒಂದು ಢಕ್ಕೆ ಬಲಿ, ಹಗಲು ತಂಬಿಲ, ರಾತ್ರಿ ತಂಬಿಲಗಳನ್ನು ಗಮನಿಸುವುದರಿಂದ ಆಸಕ್ತನ ಪ್ರಶ್ನೆಗಳಿಗೆ ಉತ್ತರ ದೊರಕಲಾಗದು. ಆದರೆ ಆಚರಣೆಯ ಕ್ರಮ, ಕಟ್ಟುಕಟ್ಟಳೆ, ವಿಧಿಗಳನ್ನು ನಿರ್ವಹಿಸುವ ವೇಳೆ ಬಳಸಲಾಗುವ ಶಬ್ದಗಳು, ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯಗಳು ವಿಧಿಸಲ್ಪಟ್ಟಿರುವ ನಿಯಮ ನಿಬಂಧನೆಗಳನ್ನು ಜಿಲ್ಲೆಯಲ್ಲಿ ಹರಡಿರುವ ಪ್ರಾಕ್ತನ ಉಪಾಸನಾ ಸ್ಥಾನಗಳಲ್ಲಿ ನಡೆಯುವ ಆಚರಣೆಗಳೊಂದಿಗೆ ಹೋಲಿಸಿ ತೌಲನಿಕವಾಗಿ ಅಧ್ಯಯನ ನಡೆಸಿದರೆ ಮೇಲ್ನೋಟಕ್ಕೆ ಒಂದು ಸ್ಥೂಲ ಚಿತ್ರಣ ಲಭಿಸುವ ಸಾಧ್ಯತೆ ಇದೆ. ಇದಕ್ಕೆ ಸಂಶೋಧನೆಯೆಂಬ ಹಣೆಪಟ್ಟಿಯನ್ನು ತೆಗೆದು ಹಾಕಿ ಅಧ್ಯಯನವೆಂಬ ವಿನೀತಭಾವ ಸ್ವೀಕರಿಸಿದಾಗ ಮಾತ್ರ ಈ ಬಯಲು ಆಲಯದ ನಿಗೂಢ ರಹಸ್ಯಗಳತ್ತ ಗಮನ ಕೇಂದ್ರೀಕರಿಸಲು ಸಾಧ್ಯ. ಇಲ್ಲವಾದಲ್ಲಿ ಎಲ್ಲವೂ ಗೋಜಲು, ಪ್ರತೀ ಹಂತವೂ ಕ್ಲಿಷ್ಟ.
    For licensing this content, please write to udayavanionline@gmail.com
    …………………………………………………………………………………….
    #KarnatakaNews #SoftStory #Udayavani #Newsupdates
    Download Udayavani App bit.ly/2Ho0YS4
    For more..
    Website:
    www.udayavani.com
    www.udayavani....
    samskruti.uday...
    Facebook:
    / udayavani.webnews
    / udayavanicinema
    / udayavanienglish
    UA-cam :
    / udayavanidigital
    Twitter:
    / udayavani_web

КОМЕНТАРІ • 42