ಸುದೀಪ್-ದರ್ಶನ್ ಕರುನಾಡಿನ ಎರಡು ಕಣ್ಣಿದ್ದಂತೆ, ಅವರಿಬ್ರೂ ಒಂದಾಗಬೇಕು | RAVI CHETHAN | SUDEEP | DARSHAN

Поділитися
Вставка
  • Опубліковано 12 лис 2021
  • #TulasiKannada #RaviChethan #KicchaSudeep #ChallengeStarDarshan
    ಕನ್ನಡದ ಹೆಸರಾಂತ ನಟರ ಜೊತೆ ಇವರು ನಟಿಸಿದ್ದಾರೆ. ವಿಷ್ಣುವರ್ದನ್, ಸುದೀಪ್, ದರ್ಶನ್ ಹೀಗೆ ಸ್ಟಾರ್ ನಟರ ಜೊತೆ ಇವರು ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆದರೆ ಸರಿಯಾದ ಅವಕಾಶ ಸಿಗದೇ ಹೀರೋ ಮೆಟೀಯರ್ ನಟ ರವಿ ಚೇತನ್ ಪೋಷಕ, ಖಳನಟನಿಗೆ ಈಗ ಸೀಮಿತವಾಗಿದ್ದಾರೆ. ಸತ್ಯಾನಂದದಂಥ ವಿವಾದಾತ್ಮಕ ಸಿನಿಮಾದ ಮೂಲಕ ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಭಾಷೆಗೂ ಇವರು ಚಿರಪರಿಚಿತರಾದ್ರು. ಇವರ ಸಿನಿಮಾ ಕರಿಯರ್ ನಲ್ಲಿ ಈ ಸಿನಿಮಾ ಟರ್ನಿಂಗ್ ಪಾಯಿಂಟ್ ಕೂಡ ಆಯಿತು. ಅದೇ ರೀತಿ ಈ ಸಿನಿಮಾಕ್ಕಾಗಿಯೇ ಬೆದರಿಕೆ ಕರೆ ಬಂತು, ಕೋರ್ಟ್ ಮೆಟ್ಟಿಲೇರಬೇಕಾಯಿತು. ಕಾಂಟ್ರವರ್ಸಿ ಕೂಡ ಆಯಿತು‌. ಇದೆಲ್ಲದರ ನಡುವೆ ರವಿ ಚೇತನ್ ಒಬ್ಬ ಅಪ್ಪಟ ಸ್ಪೋರ್ಟ್ ಮೆನ್. ಕ್ರಿಕೇಟ್ ನಿಂದಾಗಿ ಸುದೀಪ್, ವಿಷ್ಣುದಾದ ಹತ್ತಿರವಾದ್ರು. ಸಿಸಿಎಲ್ ಪ್ರಮುಖ ಅಲ್ ರೌಂಡರ್ ಆಗಿದ್ದರು‌. ಇಂಥ ಸಿನಿರಂಗದ ಕಲಾವಿದ ಮೂಲತಃ ಉತ್ತರ ಕರ್ನಾಟಕದವರು ಎಂದರೆ ಯಾರೂ ನಂಬೋದಿಲ್ಲ. ಮೊದಲು ಬ್ಯುಸಿಮೆಸ್ ಮಾಡಿ ಕೈ ಸುಟ್ಟುಕೊಂಡು, ಧಾರವಾಹಿ ಮೂಲಕ ಸಿನಿರಂಗಕ್ಕೆ ಎಂಟ್ರಿಕೊಟ್ಟರು. 25 ವರುಷಗಳ ಸಿನಿರಂಗದಲ್ಲಿ ಮಣ್ಣು ಹೊತ್ತಿರುವ ರವಿ ಚೇತನ್ ಕನ್ನಡದ ಸೋನುಸೂದ್ ಎಂದೇ ಹೆಸರುವಾಸಿ. ಇಂಥ ರವಿ ಚೇತನ್ ಸುದೀಪ್ ಹಾಗೂ ದರ್ಶನ್ ಇಬ್ಬರಿಗೂ ಆಪ್ತರು. ಇವರಿಬ್ಬರೂ ಒಂದಾಗಬೇಕು. ಕನ್ನಡ ಸಿನಿರಂಗ ಕುಟುಂಬದಂತೆ ಇರಬಹುದು. ಮೊದಲು ನಮ್ಮವರಿಗೆ ಅವಕಾಶ ಕೊಡಿ, ಆನಂತರ ಹೊರಗಡೆ ಕೊಡಿ ಎಂದು ಸವಿನಯ ಪ್ರಾರ್ಥನೆ ಕೂಡ ಮಾಡಿಕೊಳ್ತಾರೆ. ಇಷ್ಟು ಒಳ್ಳೆ ಮನಸಿನ ನಟ ರವಿ ಚೇತನ್ ಅವರು ತುಳಸಿ ಕನ್ನಡ ಯೂಟ್ಯೂಬ್ ಚಾನೆಲ್ ನೀಡಿದ ಸಂದರ್ಶನದಲ್ಲಿ ನಮ್ಮ ಸಿನಿಜರ್ನಿ, ಏಳುಬೀಳು ಕುರಿತು ಮಾತಾಡಿದ್ದಾರೆ‌‌.
    ===============================
    #TulasiKannada #RaviChethan #ActorRaviChethan #KicchaSudeep #ChallengeStarDarshan #DrVishnuvardhana #SandalwoodVillain #StarWars #KannadaFilmIndustry #Sandalwood #KFI #CCL #KicchaSudeepFriend #ChallengeStarDarshanFriend #ChetanHosur #SudeepDarshanWar
  • Розваги

КОМЕНТАРІ • 304