Swetha S Narayan Bhat
Swetha S Narayan Bhat
  • 130
  • 57 502
ಅಂಧಕನನುಜನ - ಕನಕದಾಸ ವಿರಚಿತ ಮಂಗಳ ಹಾಡು@ Swetha Narayan Bhat _ lyrics in the description with meaning
A very beautiful composition by kanakadasa which is filled with many riddles
#music #devotional #song
ನಾಹಂ ಕರ್ತಾ ಹರಿಃ ಕರ್ತಾ
ಕನಕದಾಸರ ವಿಶಿಷ್ಟ ಶೈಲಿಯೆಂದರೆ ಅವರು ಬಳಸುವ ಪದ ಸಾಹಿತ್ಯದಿಂದ ಹಲವಾರು ಕಥೆ ನೆನಪಿಸುವುದು.
ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ
ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ | ೧ |
ರಥವನಡರಿ ಸುರಪಥದಲಿ ತಿರುಗುವ ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ ಸತಿಯರನಾಳಿದ ಚತುರನಿಗೆ | ೨ |
ಹರಿಯ ಮಗನ ಶಿರ ಹರಿದನ ತಂದೆಯ ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಶಿಸುವನ ಶಿರದಲಿ ನಟಿಸಿದ ವರಕಾಗಿನೆಲೆಯಾದಿಕೇಶವರಾಯಗೆ |೩ |
ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ !!
***
Wednesday, 16 October 2019
ಮಂಗಲಂ ಜಯ ಮಂಗಲಂ ಮುಂಡಿಗೆ ankita neleyadikeshava MANGALAM JAYA MANGALAM MUNDIGE
ಮಂಗಲಂ ಜಯ ಮಂಗಲಂ
ಮಂಗಲಂ ಜಯ ಮಂಗಲಂ
ಅಂಧಕನನುಜನ ಕಂದನ ತಂದೆಯ
ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲ
ವಿಂದದಿ ಧರಿಸಿದ ಮುಕುಂದನಿಗೆ | ೧ |
ರಥನಡರಿ ಸುರಪಥದಲಿ ತಿರುಗುವ
ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ
ಸತಿಯರನಾಳಿದ ಚತುರನಿಗೆ | ೨ |
ಹರಿಯ ಮಗನ ಶಿರ ಹರಿದನ ತಂದೆಯ
ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಶಿಸುವನ ಶಿರದಲಿ ನಟಿಸಿದ
ವರಕಾಗಿನೆಲೆಯಾದಿಕೇಶವರಾಯಗೆ | ೩ |
***
Mangalam jayamamgalam||pa||
Andhakananujana kandana tandeya kondana Siradali nindavana |
Chendadi padedana nandaneyalanolavindadi dharisida mukundanige | 1 |
Rathavanadari surapathadali tiruguva sutanige sapavanittavana |
Katiyannu tadedana satiya janini suta satiyaranalida caturanige | 2 |
Hariya magana Sira haridana tandeya hiriya magana tammana pitana |
Baradi bakshisuvana Siradali natisida varakagineleyadikesavarayage | 3 |
***
ಕನಕದಾಸರ ಮಂಗಲ
🍀🍀🍀🍀🍀🍀
ಕನಕದಾಸರ ವಿಶಿಷ್ಟ ಶೈಲಿಯೆಂದರೆ ಅವರು ಬಳಸುವ ಪದ ಸಾಹಿತ್ಯದಿಂದ ಹಲವಾರು ಕಥೆ ನೆನಪಿಸುವುದು.
ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ
ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ | ೧ |
ರಥವನಡರಿ ಸುರಪಥದಲಿ ತಿರುಗುವ ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ ಸತಿಯರನಾಳಿದ ಚತುರನಿಗೆ | ೨ |
ಹರಿಯ ಮಗನ ಶಿರ ಹರಿದನ ತಂದೆಯ ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಶಿಸುವನ ಶಿರದಲಿ ನಟಿಸಿದ ವರಕಾಗಿನೆಲೆಯಾದಿಕೇಶವರಾಯಗೆ |೩ |
ಮಂಗಲಂ ಜಯ ಮಂಗಲಂ ಮಂಗಲಂ ಜಯ ಮಂಗಲಂ !!
***
explanation by narahari sumadhwa
ಅಂಧಕನನುಜನ ಕಂದನ ತಂದೆಯ ಕೊಂದನ ಶಿರದಲಿ ನಿಂದವನ
ಚೆಂದದಿ ಪಡೆದನ ನಂದನೆಯಳನೊಲವಿಂದದಿ ಧರಿಸಿದ ಮುಕುಂದನಿಗೆ | ೧ |
ವಿವರಣೆ:.
ಅಂಧಕನ - ಧೃತರಾಷ್ಟ್ರನ
ಅನುಜನ - ಅನುಜ ಪಾಂಡುವಿನ
ಕಂದನ - ಕಂದನಾದ ಯುಧಿಷ್ಠಿರನ
ತಂದೆಯ - ಪಿತ ಯಮಧರ್ಮನ
ಕೊಂದನ - ಕಾರ್ಯವನ್ನು ತಡೆದ ಶಿವನ (ಮಾರ್ಕಂಡೇಯನ ಎಳೆದೊಯ್ಯಲು ಬಂದ ಯಮನ ವಾಪಸ್ಸು ಕಳುಹಿದ ಶಿವ)
ಶಿರದಲಿ ನಿಂದವನ - ತಲೆಯಲ್ಲಿ ಆಶ್ರಿತ ಚಂದ್ರನ
ಚಂದದಿ ಪಡೆದನ - ಸಮುದ್ರಮಥನದಿ ಪಡೆದ ಸಮುದ್ರರಾಜನ (ವರುಣನ)
ನಂದನೆಯಳನು - ಪುತ್ರಿ ಲಕ್ಷ್ಮೀ ದೇವಿಯ
ಒಲವಿಂದದಿ - ಒಲವಿನಿಂದ
ಧರಿಸಿದ ಮುಕುಂದನಿಗೆ - ವಿವಾಹವಾದ ಮುಕುಂದ ಶ್ರೀಹರಿಗೆ ಮಂಗಲಂ|
ಇಲ್ಲಿ ನೇರವಾಗಿ ಮುಕುಂದನಿಗೆ ಮಂಗಳವೆನ್ನಬಹುದಿತ್ತು. ಆದರೆ ಇಲ್ಲಿ ಮಾರ್ಕಂಡೇಯನ ಚಿರಂಜೀವಿತ್ವ ನೀಡಲು ಶಿವನ ಕಾರ್ಯ, ಸಮುದ್ರಮಥನದಿ ಜನಿಸಿದ ಲಕ್ಷ್ಮೀದೇವಿಯ ಸ್ತುತಿ, ವಿವರಿಸಿ ಮುಕುಂದನಿಗೆ ಮಂಗಳವೆಂದಿದ್ದಾರೆ.
ರಥವನಡರಿ ಸುರಪಥದಲಿ ತಿರುಗುವ ಸುತನಿಗೆ ಶಾಪವನಿತ್ತವನ
ಖತಿಯನ್ನು ತಡೆದನ ಸತಿಯ ಜನನಿ ಸುತ ಸತಿಯರನಾಳಿದ ಚತುರನಿಗೆ | ೨ |
ರಥವನಡರಿ ಸುರಪಥದಿ ತಿರುಗುವ - ಸುರಮಾರ್ಗದಿ ಮೇರುಪರ್ವತವ ಸುತ್ತುವ ಸೂರ್ಯನ
ಸುತನಿಗೆ - ಕರ್ಣನಿಗೆ
ಶಾಪವನಿತ್ತವನ - ಪರಶುರಾಮನ
ಖತಿಯನು ತಡೆದನ - ದರ್ಪವನ್ನು ತಡೆದ (ಲೋಕದೃಷ್ಟಿಯಿಂದ ದರ್ಪ ತೋರಿದ ಪರಶುರಾಮ) ರಾಮನ
ಸತಿಯ - ಸೀತಾದೇವಿಯ
ಜನನಿ - ಭೂಮಾತೆಯ
ಸುತ - ನರಕಾಸುರನ
ಸತಿಯರನಾಳಿದ ಚತುರನಿಗೆ - ಬಳಿಯಿರಿಸಿಕೊಂಡಿದ್ದ ೧೬೧೦೦ ನಾರಿಯರ ವಿವಾಹವಾದ ಶ್ರೀಕೃಷ್ಣನಿಗೆ |
ಮಂಗಲಂ
ಇಲ್ಲಿ ಪರಶುರಾಮಾವತಾರ, ಕರ್ಣನಿಗೆ ಶಾಪ, ರಾಮಾವತಾರ, ಸೀತಾವತಾರ, ಕೃಷ್ಣನ ೧೬೧೦೦ ಕಲ್ಯಾಣ ಇಷ್ಟೂ ಕಥೆಯನ್ನು ಕೆಲವೇ ಪದಗಳ ಜೋಡಣೆಯಿಂದ ತಿಳಿಸಿದ್ದಾರೆ.
ಹರಿಯ ಮಗನ ಶಿರ ಹರಿದನ ತಂದೆಯ
ಹಿರಿಯ ಮಗನ ತಮ್ಮನ ಪಿತನ
ಭರದಿ ಭಕ್ಷಿಸುವನ ಶಿರದಲಿ ನಟಿಸಿದ
ವರಕಾಗಿನೆಲೆಯಾದಿ ಕೇಶವರಾಯಗೆ
ಮಂಗಲಂ ಜಯ ಮಂಗಲಂ
ವಿವರಣೆ
ಹರಿಯ ಮಗನ - ಹರಿಯ - ಸೂರ್ಯನ ಮಗನ - ಕರ್ಣನ
ಶಿರ ತರಿದವನ - ಶಿರವನ್ನು ಬೀಳಿಸಿದ ಅರ್ಜುನನ
ತಂದೆಯ - ಪಾಂಡುವಿನ
ಹಿರಿಯ ಮಗನ - ಧರ್ಮರಾಜನ
ತಮ್ಮನ - ಭೀಮಸೇನದೇವರ
*ಪಿತನ * - ಪಿತ ವಾಯುದೇವರು ನಿಯಾಮಕರಾಗಿರುವ ಗಾಳಿಯನ್ನು
ಭರದಿ ಭುಂಜಿಸುವನ - ವಾಯು ಭಕ್ಷಕನಾದ ಸರ್ಪದ ಅರ್ಥಾತ್ ಕಾಲೀಯನ
ಶಿರದಲ್ಲಿ ನಟಿಸಿದ - ಶಿರದಲ್ಲಿ ಅದ್ಭುತ ನಾಟ್ಯವನ್ನು (ಕಾಳಿಂಗಮರ್ದನ) ಮಾಡಿದ
ವರಕಾಗಿನೆಲೆಯಾದಿ ಕೇಶವರಾಯಗೆ
- ಕನಕದಾಸರ ಆರಾಧ್ಯದೇವ ಆದಿದೇವನಿಗೆ
ಮಂಗಲಂ ಜಯ ಮಂಗಲಂ
ಲೇಖನ - ನರಹರಿ ಸುಮಧ್ವ
ಆಧಾರ - ಶ್ರೀ ಚತುರ್ದಶಿ ವೇದವ್ಯಾಸಾಚಾರ್ಯರ ಅರ್ಥ ಚಿಂತನೆ
Переглядів: 314

Відео

ಆನಂದಮಯಗೆ ಚಿನ್ಮಯಗೆ _ವಾದಿರಾಜ ವಿರಚಿತ ಆರತಿ ಹಾಡು @Swetha Narayan Bhat - lyrics in the description
Переглядів 37021 день тому
ನಾಹಂ ಕರ್ತಾ ಹರಿಃ ಕರ್ತಾ #devotional #music #ಆರತಿಹಾಡು ಆನಂದಮಯಗೆ ಚಿನ್ಮಯಗೆ ಶ್ರೀಮನ್ನಾರಾಯಣಗೆ ಆರತಿ ಎತ್ತಿರೇ || ಆನಂದಮಯಗೆ || ವೇದವ ತಂದು ಬೆಟ್ಟವ ಹೊತ್ತು ಧರಣಿಯ ಸಾಧಿಸಿ ಕಂಭದಿ ಬಂದವಗೆ ಭೂದಾನವ ಕೇಳಿ ನೃಪನ ಸಂಹರಿಸಿದ ಆದಿಮೂರುತಿಗೆ ಆರತಿ ಎತ್ತಿರೇ || ಆನಂದಮಯಗೆ || ಇಂದುವದನೆ ಕೂಡಿ ಅಡವಿಯ ಚರಿಸಿ ನಂದಗೋಕುಲದಿ ನಲಿದವಗೆ ಮಂದಗಮನೆಯರ ಮುಂದೆ ನಿರ್ವಾಣದಿ ನಿಂದ ಮೂರುತಿಗೆ ಆರತಿ ಎತ್ತಿರೇ || ಆನಂದಮಯಗೆ || ತುರಗವನೇರಿ ದೈತ್ಯರ ಸೀಳಿ ಸುಜನರ ಪೊರೆವ ಮಂಗಳ ಹಯವದನನಿಗೆ ವರದಯಾದ...
ನೀ ನಮ್ಮ ಗೆಲುವಾಗಿ ಬಾ _by Mahathi and Ganavi
Переглядів 8821 день тому
#devotional #music #dance #bharatanatyam
ಹಾದಿಮೆರೆದು ಬಂದನಲ್ಲೇ.....ಕೋಲಾಟ @Swetha Narayan Bhat
Переглядів 14921 день тому
#devotional #music #kolatam
ತುಲಸಿದಳಮುಲಚೇ ಸಂತೋಷಮುಗ _ಶ್ರೀ ತ್ಯಾಗರಾಜರ ಕೃತಿ @Swetha Narayan Bhat
Переглядів 173Місяць тому
ನಾಹಂ ಕರ್ತಾ ಹರಿಃ ಕರ್ತಾ #devotional #music #carnatic #celebration #song
ಬೃಂದಾವನವೇ ಮಂದಿರವಾಗಿಹೆ _ ಪುರಂದರದಾಸರ ಕೀರ್ತನೆ @Swetha Narayan Bhat
Переглядів 173Місяць тому
ನಾಹಂ ಕರ್ತಾ ಹರಿಃ ಕರ್ತಾ #devotional #music #carnatic #celebration #song
ಅಮ್ಮ ರಾವಮ್ಮ ತುಳಸಮ್ಮ _ ಶ್ರೀ ತ್ಯಾಗರಾಜರ ಕೃತಿ @Swetha Narayan Bhat
Переглядів 407Місяць тому
ನಾಹಂ ಕರ್ತಾ ಹರಿಃ ಕರ್ತಾ #devotional #music #carnatic #song
ಮೀನಾಲೋಚನಿ ಅಂಬ - ಮುತ್ತಯ್ಯ ಭಾಗವತರ ರಚನೆ @Swetha Narayan Bhat _ ನವರಾತ್ರಿ ಸಡಗರ ದಿನ ೧೦
Переглядів 50Місяць тому
A beautiful composition by Sri muttayya bhagavatar set to Todi raaga roopaka taala
ಕಾಮಾಕ್ಷಿ ಕಾಮಕೋಟಿ ಪೀಠವಾಸಿನಿ - ಮುತ್ತುಸ್ವಾಮಿ ದೀಕ್ಷಿತರ ರಚನೆ @Swetha Narayan Bhat _ನವರಾತ್ರಿ ಸಡಗರ ದಿನ ೯
Переглядів 87Місяць тому
A famous kriti by sri Muttu Swami Dikshtar set to simhendra madhyama raaga roopaka taala ನಾಹಂ ಕರ್ತಾ ಹರಿಃ ಕರ್ತಾ #devotional #music #carnatic #ದಸರಾ #celebration
ಮರಕತವಲ್ಲಿ ಮನಸಾಸ್ಮರಾಮಿ - ಮುತ್ತುಸ್ವಾಮಿ ದೀಕ್ಷಿತರ ರಚನೆ @Swetha Narayan Bhat _ನವರಾತ್ರಿ ಸಡಗರ ದಿನ ೮
Переглядів 75Місяць тому
A very popular kriti by sri Muttu Swami Dikshtar set to kambhoji raaga aadi taala ನಾಹಂ ಕರ್ತಾ ಹರಿಃ ಕರ್ತಾ #devotional #music #carnatic #ದಸರಾ #song
ಸರಸ್ವತೀ ನಮೋಸ್ತುತೆ - ಜಿ ಎನ್ ಬಾಲಸುಬ್ರಹ್ಮಣ್ಯಂ ಅವರ ರಚನೆ @Swetha Narayan Bhat _ ನವರಾತ್ರಿ ಸಡಗರ ದಿನ ೭
Переглядів 185Місяць тому
A marvelous kriti composed by G N Balasubramaniam on maa Sharada Devi set to saraswati raaga roopaka taala #devotional #music #carnatic #ದಸರಾ #celebration
ಮಾಯಾತೀತ ಸ್ವರೂಪಿಣಿ _ ತಂಜಾವೂರು ಪೊನ್ನಯ್ಯ ಅವರ ರಚನೆ @Swetha Narayan Bhat _ ನವರಾತ್ರಿ ಸಡಗರ ದಿನ ೬
Переглядів 95Місяць тому
A nice composition by Sri Tanjavuru Ponnayya set to mayamalavagoula raaga roopaka taala ನಾಹಂ ಕರ್ತಾ ಹರಿಃ ಕರ್ತಾ #devotional #music #carnatic #ದಸರಾ #celebration
ಶ್ರೀ ಚಾಮುಂಡೇಶ್ವರಿ - ಮೈಸೂರು ವಾಸುದೇವಾಚಾರ್ಯರ ರಚನೆ@Swetha Narayan Bhat _ ನವರಾತ್ರಿ ಸಡಗರ ದಿನ ೫
Переглядів 119Місяць тому
A master piece by sri Mysuru Vasudevacharya, a legendary carnatic musician who composed on Devi Sri Chaamundeshwari .Set to bilahari raaga aaditaala ನಾಹಂ ಕರ್ತಾ ಹರಿಃ ಕರ್ತಾ #devotional #music #carnatic #ದಸರಾ #celebration
ಸಹಸ್ರಕರಮಂಡಿತೆ ಸಲಿಸೌ- ಮುತ್ತಯ್ಯ ಭಾಗವತರ ರಚನೆ @ Swetha Narayan Bhat _ ನವರಾತ್ರಿ ಸಡಗರ ದಿನ ೪
Переглядів 93Місяць тому
A devotional composition by Sri muttayya bhagavatar set to vaachaspati raaga aaditaala ನಾಹಂ ಕರ್ತಾ ಹರಿಃ ಕರ್ತಾ #devotional #music #carnatic #ದಸರಾ #
ಶ್ರೀ ಕಾಮಕೋಟಿ ಪೀಠಸ್ಥಿತೇ - ಮೈಸೂರು ಸದಾಶಿವರಾಯರ ರಚನೆ @Swetha Narayan Bhat _ ನವರಾತ್ರಿ ಸಡಗರ ದಿನ ೩
Переглядів 136Місяць тому
ಶ್ರೀ ಕಾಮಕೋಟಿ ಪೀಠಸ್ಥಿತೇ - ಮೈಸೂರು ಸದಾಶಿವರಾಯರ ರಚನೆ @Swetha Narayan Bhat _ ನವರಾತ್ರಿ ಸಡಗರ ದಿನ ೩
ಶ್ರೀ ಮಧುರಾಪುರಿ ವಿಹಾರಿಣಿ -- ಮುತ್ತುಸ್ವಾಮಿ ದೀಕ್ಷಿತರ ರಚನೆ @ Swetha Narayan Bhat _ ನವರಾತ್ರಿ ಸಡಗರ ದಿನ ೨
Переглядів 1392 місяці тому
ಶ್ರೀ ಮಧುರಾಪುರಿ ವಿಹಾರಿಣಿ ಮುತ್ತುಸ್ವಾಮಿ ದೀಕ್ಷಿತರ ರಚನೆ @ Swetha Narayan Bhat _ ನವರಾತ್ರಿ ಸಡಗರ ದಿನ ೨
ಸರೋಜದಳ ನೇತ್ರಿ ಹಿಮಗಿರಿ ಪುತ್ರಿ - ಶ್ಯಾಮಾಶಾಸ್ತ್ರಿಗಳ ರಚನೆ @Swetha Narayan Bhat _ ನವರಾತ್ರಿ ಸಡಗರ ದಿನ ೧
Переглядів 1592 місяці тому
ಸರೋಜದಳ ನೇತ್ರಿ ಹಿಮಗಿರಿ ಪುತ್ರಿ - ಶ್ಯಾಮಾಶಾಸ್ತ್ರಿಗಳ ರಚನೆ @Swetha Narayan Bhat _ ನವರಾತ್ರಿ ಸಡಗರ ದಿನ ೧
Shambho Shankara @Swetha Narayan Bhat
Переглядів 2512 місяці тому
Shambho Shankara @Swetha Narayan Bhat
Sri krishna janmashtami celebration in my home
Переглядів 1093 місяці тому
Sri krishna janmashtami celebration in my home
Sanskrit day celebration। विश्व संस्कृत दिनाचरणम्। shlokas by kids
Переглядів 663 місяці тому
Sanskrit day celebration। विश्व संस्कृत दिनाचरणम्। shlokas by kids
Raghupati Raghava Rajaram - original song by Lakshmanacharya @Swetha Narayan bhat
Переглядів 31610 місяців тому
Raghupati Raghava Rajaram - original song by Lakshmanacharya @Swetha Narayan bhat
Sri Krishna baala leela @Swetha Narayan Bhat
Переглядів 29111 місяців тому
Sri Krishna baala leela @Swetha Narayan Bhat
ಸಲಹೊ ಎನ್ನ ಶ್ರೀನಿವಾಸ@Swetha Narayan Bhat
Переглядів 193Рік тому
ಸಲಹೊ ಎನ್ನ ಶ್ರೀನಿವಾಸ@Swetha Narayan Bhat
ಜಯ ಜಗದಂಬೇ @Swetha Narayan Bhat _ನವರಾತ್ರಿಯ ಶುಭಾಶಯಗಳು
Переглядів 127Рік тому
ಜಯ ಜಗದಂಬೇ @Swetha Narayan Bhat _ನವರಾತ್ರಿಯ ಶುಭಾಶಯಗಳು
ಗುರುವಿನ ಗುಲಾಮ@Swetha Narayan Bhat
Переглядів 162Рік тому
ಗುರುವಿನ ಗುಲಾಮ@Swetha Narayan Bhat
ಕರುಣಿಸೋ ರಂಗನಾಥ @Swetha Narayan Bhat
Переглядів 210Рік тому
ಕರುಣಿಸೋ ರಂಗನಾಥ @Swetha Narayan Bhat
ವಂದಿಪೆ ಗಣಪನ @Swetha Narayan Bhat _ಗಣೇಶ ಚತುರ್ಥಿಯ ಶುಭಾಶಯಗಳು
Переглядів 353Рік тому
ವಂದಿಪೆ ಗಣಪನ @Swetha Narayan Bhat _ಗಣೇಶ ಚತುರ್ಥಿಯ ಶುಭಾಶಯಗಳು
ಯಾದವರಾಯ ಶ್ರೀ ಕೃಷ್ಣ@Swetha Narayan Bhat _ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
Переглядів 161Рік тому
ಯಾದವರಾಯ ಶ್ರೀ ಕೃಷ್ಣ@Swetha Narayan Bhat _ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
ಉಡುಪಿ ಕೃಷ್ಣ @Swetha Narayan Bhat (ಉಡುಪಿ ಕೃಷ್ಣನ ಕಥೆ ಪದ್ಯ ರೂಪದಲ್ಲಿ)
Переглядів 279Рік тому
ಉಡುಪಿ ಕೃಷ್ಣ @Swetha Narayan Bhat (ಉಡುಪಿ ಕೃಷ್ಣನ ಕಥೆ ಪದ್ಯ ರೂಪದಲ್ಲಿ)
ರಾಮ ನಾಮ ಸ್ಮರಣೆ@Swetha Narayan Bhat
Переглядів 324Рік тому
ರಾಮ ನಾಮ ಸ್ಮರಣೆ@Swetha Narayan Bhat

КОМЕНТАРІ